ಉಪ್ಪುಂದ ಶ್ರೀ ಅಶ್ವತ್ಥನಾರಾಯಣ ಮೂಡುಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಯು. ದಾಮೋದರ ಶೆಣೈ ನೇತೃತ್ವದಲ್ಲಿ ದೇವಳದ ಸೇವಾ ಸಮಿತಿ ಸರ್ವ ಸದಸ್ಯರು 1.70 ಲಕ್ಷ ರೂ.ವೆಚ್ಚದ ಬೆಳ್ಳಿಯ ಪೂಜಾ ಪರಿಕರಗಳನ್ನು ಸಮರ್ಪಿಸಿದರು.  
ಜಿಲ್ಲೆ

ಉಪ್ಪುಂದ ದೇವಳಕ್ಕೆ ಬೆಳ್ಳಿ ಪರಿಕರ ಸಮರ್ಪಣೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಉಪ್ಪುಂದ ಶ್ರೀ ಅಶ್ವತ್ಥನಾರಾಯಣ ಮೂಡುಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ ಉದಯಾಸ್ತಮಾನ ಪೂಜೆ ಹಾಗೂ ಗಣಪತಿ ಹವನ ನಡೆಯಿತು. ಮಧ್ಯಾಹ್ನ ಯು. ರಾಜೀವ ಭಟ್ ಮಾರ್ಗದರ್ಶನದಲ್ಲಿ ಅರ್ಚಕ ಯು. ವಿನಾಯಕ ಭಟ್ ನೇತೃತ್ವದಲ್ಲಿ ದೇವರಿಗೆ ಮೋದಕ ನೈವೇದ್ಯ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.

ಯು. ದಾಮೋದರ ಶೆಣೈ ನೇತೃತ್ವದಲ್ಲಿ 40 ವರ್ಷಗಳಿಂದ ದೇವಳದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಸೇವಾ ಸಮಿತಿ ಸರ್ವ ಸದಸ್ಯರು 1.70 ಲಕ್ಷ ರೂ.ವೆಚ್ಚದ ಬೆಳ್ಳಿಯ ಪೂಜಾ ಪರಿಕರಗಳನ್ನು ಸಮರ್ಪಿಸಿದರು. ರಾತ್ರಿ ವಿಶೇಷ ಅಲಂಕಾರ ಪೂಜೆ ಹಾಗೂ ರಜತ ತೊಟ್ಟಿಲ ಸೇವೆ ನಡೆಯಿತು.

ಸಮಿತಿ ಸದಸ್ಯರಾದ ಯು. ಶಾಂತಾರಾಮ ಭಟ್, ಬಿ.ವಿಠ್ಠಲದಾಸ್ ಪ್ರಭು, ಕೊರಗ ದೇವಾಡಿಗ, ಬಿ.ಎ.ಮಂಜು ದೇವಾಡಿಗ, ಓಂಗಣೇಶ್ ಕಾಮತ್, ಯು.ಯೋಗೀಶ ಪ್ರಭು, ಯು.ನಾಗೇಶ ಪ್ರಭು, ಯು. ರಾಜಾರಾಮ ಪಡಿಯಾರ್, ಅರುಣ್ ಭಟ್, ನಾಗೇಶ ಭಟ್ ಮೊದಲಾದವರು ಇದ್ದರು.