ಕೊಟ್ಟೂರಿನಲ್ಲಿ ಸೋಮವಾರ ನಡೆದ ಸಿದ್ಧರಾಮೇಶ್ವರ ಜಯಂತಿಯಲ್ಲಿ ತಹಸೀಲ್ದಾರ್ ಜಿ.ಕೆ.ಅಮರೇಶ, ಸಿಆರ್‌ಪಿ ಮಂಜುನಾಥ, ಭೋವಿ ಸಮಾಜದ ಪ್ರಮುಖರಾದ ಡಿ.ನಾಗೇಶ, ಪಿ.ಎಚ್.ರಾಘವೇಂದ್ರ, ಯರಿಸ್ವಾಮಿ ಇತರರಿದ್ದರು. 
ಜಿಲ್ಲೆ

ಸಿದ್ಧರಾಮೇಶ್ವರರ ತತ್ವ-ಸಿದ್ಧಾಂತ ಎಂದೆಂದಿಗೂ ಪ್ರಸ್ತುತ

ರುದ್ರಪ್ಪ ವಾಲಿ

ಕೊಟ್ಟೂರು: ಜನ-ಜಾನುವಾರುಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಲು ಕೆರೆ ಕಟ್ಟೆಗಳನ್ನು ನಿರ್ಮಿಸಿರುವ ಸಿದ್ಧರಾಮೇಶ್ವರ ನಡೆ ಎಂದೆಂದಿಗೂ ಶ್ಲಾಘನೀಯ ಎಂದು ತಹಸೀಲ್ದಾರ್ ಜಿ.ಕೆ. ಅಮರೇಶ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸಿದ್ಧರಾಮೇಶ್ವರ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು. ಅಂತರ್ಜಲ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೂ ನಮ್ಮ ಪೂರ್ವಜರು ನಿರ್ಮಿಸಿರುವ ಕೆರೆ, ಕಟ್ಟೆಗಳನ್ನು ಹಾಳಾಗದಂತೆ ಮತ್ತು ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸಬೇಕು. ದುಡಿಮೆಯಲ್ಲಿ ಭಗವಂತನನ್ನು ಕಾಣಬೇಕು.

ಕಷ್ಟಬಂದಾಗ ಕೊರಗದೆ ತಾಳ್ಮೆ-ಸಹನೆಯಿಂದ ಬದುಕಬೇಕೆಂದು ಸಾರಿದ ಶರಣ ಸಿದ್ಧರಾಮೇಶ್ವರ ತತ್ವ-ಸಿದ್ಧಾಂತವನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸಿಆರ್‌ಪಿ ಮಂಜುನಾಥ ಮಾತನಾಡಿದರು.

ಭೋವಿ ಸಮಾಜದ ಪ್ರಮುಖರಾದ ಡಿ.ನಾಗೇಶ, ಪಿ.ಎಚ್.ರಾಘವೇಂದ್ರ, ಯರಿಸ್ವಾಮಿ, ಶಶಿಧರ, ಬಿ. ಮೋಹರ, ಚಿರಂಜೀವಿ, ಕಂದಾಯ ನಿರೀಕ್ಷ ಹಾಲಸ್ವಾಮಿ, ಎಂ.ಹರೀಶ, ವಿಜಯಕುಮಾರ್ ಪುಟಾಣಿ, ಶರಣಪ್ಪ ಮುಂತಾದವರಿದ್ದರು. ಸಿ.ಮ. ಗುರುಬಸವರಾಜ್ ಸ್ವಾಗತಿಸಿ-ನಿರೂಪಿಸಿದರು.