ಜಿಲ್ಲೆ

ಮಹಿಳೆಯರಿಗೆ ಗೌರವ ನೀಡುವ ಸಂಸ್ಕೃತಿ : ತಹಸೀಲ್ದಾರ್ ಅರ್ಚನಾ ಡಿ.ಭಟ್ ಅಭಿಮತ

ಸೌಮ್ಯ ಆರ್

ಬಂಟ್ವಾಳ: ದೇಶದಲ್ಲಿ ಪುರಾಣ ಕಾಲದಿಂದಲೂ ಮಹಿಳೆಯರಿಗೆ ವಿಶೇಷ ಗೌರವ ನೀಡುವ ಸಂಸ್ಕೃತಿ ಬೆಳೆದು ಬಂದಿದೆ ಎಂದು ತಹಸೀಲ್ದಾರ್ ಅರ್ಚನಾ ಡಿ.ಭಟ್ ಹೇಳಿದರು.

ಇಲ್ಲಿನ ಸಿದ್ದಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ವತಿಯಿಂದ ಬುಧವಾರ ಆರಂಭಗೊಂಡ 6ನೇ ವರ್ಷದ ಸಿದ್ದಕಟ್ಟೆ ದಸರಾ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ಕೆ.ಪೂಜಾರಿ, ಲಯನ್ಸ್ ಕ್ಲಬ್ ಸದಸ್ಯೆ ಸಂಧ್ಯಾ ರವಾನಂದ ನೂಜಿಪ್ಪಾಡಿ, ಮುಖ್ಯಶಿಕ್ಷಕಿ ವಿಜಯಶ್ರೀ ಚೆನ್ನೈತ್ತೋಡಿ, ಸಹಶಿಕ್ಷಕಿ ಹರಿಣಾಕ್ಷಿ ಕೊಲ, ಸಿದ್ದಕಟ್ಟೆ ಡಿಸಿಸಿ ಬ್ಯಾಂಕ್ ಪ್ರಬಂಧಕಿ ಜ್ಯೋತಿ ನಾಯಕ್ ಶುಭ ಹಾರೈಸಿದರು. ಮಹಿಳಾ ಸಮಿತಿ ಗೌರವಾಧ್ಯಕ್ಷೆ ಜಲಜಾ ಹರೀಶ ಕುಂದರ್ ಮತ್ತಿತರರು ಇದ್ದರು.

ವಿವಿಧ ಸ್ಪರ್ಧಾ ವಿಜೇತರಿಗೆ ಬಹುವಾನ ವಿತರಿಸಿ, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಕುಂತಳಾ ಆಚಾರ್ಯ ಸ್ವಾಗತಿಸಿ, ಹೇಮಲತಾ ಶೆಟ್ಟಿಗಾರ್ ವಂದಿಸಿದರು. ಲಿಖಿತಾ ಆರ್.ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.