ಯಕ್ಷಗಾನವಾಗಿ ಗೊಕುಲ ನಿಗಮನ ಪ್ರದರ್ಶನದಲ್ಲಿ ಡಾ.ತನ್ಮಯ್ ಗೋಸ್ವಾಮಿ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಸ್ಕಂದ ಉರಾಳ್, ವಿವಿಧ ದೇಶದ ಯಕ್ಷಗಾನದ ಅಭಿಮಾನಿಗಳು ಉಪಸ್ಥಿತರಿದ್ದರು 
ಜಿಲ್ಲೆ

ಅನಾರೋಗ್ಯದ ಮನಸ್ಥಿತಿಗೆ ಕಲೆಗಳು ಪೂರಕ : ಡಾ.ತನ್ಮಯ್ ಗೋಸ್ವಾಮಿ ಅಭಿಮತ ; ಗೋಕುಲ ನಿರ್ಗಮನ ಪ್ರದರ್ಶನ

ಇಂದಿರಾ ಎನ್ ಕೆ

ಕೋಟ: ಕರಾವಳಿಯ ಕಲೆ ಯಕ್ಷಗಾನ ಪ್ರಬುದ್ಧ. ಇತ್ತೀಚೆಗೆ ಹೊರ ರಾಜ್ಯ ಹಾಗೂ ದೇಶದವರೂ ಈ ಕಲೆಗೆ ಆಸಕ್ತರಾಗುತ್ತಿರುವುದು ನಮ್ಮ ಹೆಮ್ಮೆ. ಅನಾರೋಗ್ಯದ ಮನಸ್ಥಿತಿಗೆ ಇಂತಹ ಅನೇಕ ಕಲೆಗಳು ಪೂರಕ. ಪುರಾಣ ಕಥೆಯ ಹೂರಣವನ್ನು ಸವಿದಷ್ಟೂ ಆಸ್ವಾದಕರ. ಅದರಲ್ಲೂ ಯಕ್ಷಗಾನ ಕಲೆ ಕಣ್ಣಿಗೆ, ಕಿವಿಗೆ ಮುದ ನೀಡುವ ಕಲೆಯಾಗಿದೆ ಎಂದು ಗೋಸ್ವಾಲ್ಸ್ ಮೈತ್ರೇಯ ಆಯುರ್ವೇದ ಆಶ್ರಮದ ಡಾ.ತನ್ಮಯ್ ಗೋಸ್ವಾಮಿ ಅಭಿಪ್ರಾಯಪಟ್ಟರು.
ತೆಕ್ಕಟ್ಟೆ ಕೊಮೆಯಲ್ಲಿ ಗೋಸ್ವಾಲ್ಸ್ ಮೈತ್ರೇಯ ಆಯುರ್ವೇದ ಆಶ್ರಮದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಿನ್ಸ್ 1999 ಶ್ವೇತಯಾನ-38ರ ಕಾರ್ಯಕ್ರಮದಲ್ಲಿ ಜೂನ್ 29ರಂದು ವಿದೇಶಿಗರಿಗೆ ಯಕ್ಷಗಾನದ ಬಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯಕ್ಷಗಾನವಾಗಿ ಗೋಕುಲ ನಿರ್ಗಮನ ಪ್ರದರ್ಶನದಲ್ಲಿ ಮಾತನಾಡಿದರು.

ಇಲ್ಲಿನ ಕಾಸ್ಟೂೃಮ್ ಚಿಕ್ಕ ಚಿಕ್ಕ ಮಕ್ಕಳಿಂದ ಮುದುಕರವರೆಗೂ ಆಕರ್ಷಣೀಯ. ಕಣ್ಮನ ತಣಿಯುವ ಯಕ್ಷಗಾನ ಪಾಶ್ಚಾತ್ಯರಿಗೆ ಉಣ ಬಡಿಸುವ ಕೆಲಸ ಆಗಾಗ ನಮ್ಮ ಆಶ್ರಮದಲ್ಲಿ ಆಗುತ್ತಿರುತ್ತದೆ. ಅತಿ ಚಿಕ್ಕ ಸಮಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಪುರಾಣ ಕಥೆಯ ಹೂರಣವನ್ನು ವಿದೇಶಿಗರಿಗೆ ಉಣಿಸಿ ಸೈ ಎನಿಸಿಕೊಂಡ ಸಂಸ್ಥೆ ಯಶಸ್ವೀ ಕಲಾವೃಂದ ಎಂದರು.ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಸ್ಕಂದ ಉರಾಳ್, ವಿವಿಧ ದೇಶದ ಯಕ್ಷಗಾನದ ಅಭಿಮಾನಿಗಳು ಉಪಸ್ಥಿತರಿದ್ದರು.