ವಿಜಯವಾಣಿ ಸುದ್ದಿಜಾಲ ಸುಳ್ಯ
ಆಧುನಿಕ ಬದುಕಿನಲ್ಲಿ ಆಹಾರ ಸೇವನೆಗೆ ಉಪಹಾರ ಗೃಹ, ಹೋಟೆಲ್‌ಗಳನ್ನು ಅವಲಂಬಿಸಬೇಕಾಗಿ ಬರುವುದು ಸಹಜ. ಶುಚಿ,ರುಚಿಯಾದ ಆಹಾರವನ್ನು ನೀಡುವ ಮೂಲಕ ಗ್ರಾಹಕರ ಆರೋಗ್ಯ ಕಾಪಾಡಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಬೇಕು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸುಳ್ಯ ಸಮೀಪ ಅರಂಬೂರಿನಲ್ಲಿ ಉದ್ಯಮಿಗಳಾದ ನಾರಾಯಣ ಕೇಕಡ್ಕ ಹಾಗೂ ಕೃಷ್ಣ ಕಾಮತ್ ಪಾಲುದಾರಿಕೆಯ ‘ರಸಪಾಕ ಗ್ರೂಪ್ಸ್’ ವತಿಯಿಂದ ಆರಂಭಗೊಂಡ ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್’ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೋಟೆಲ್ ಲೋಕಾರ್ಪಣೆ ಮಾಡಿದರು. ಹವಾನಿಯಂತ್ರಿತ ಕೊಠಡಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಕುಂಟಾರು ರವೀಶ ತಂತ್ರಿ ಹಾಗೂ ದೇಲಂಪಾಡಿ ಗಣೇಶ್ ತಂತ್ರಿ ಆಶೀರ್ವಚನ ನೀಡಿದರು. ಹೋಟೆಲ್‌ನ ಪಾಲುದಾರ ಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಎಸ್.ಅಂಗಾರ, ಕಾಸರಗೋಡು ಕಾಮತ್ ಮೆಡಿಕಲ್ ಸೆಂಟರ್‌ನ ಡಾ.ಅನಂತ್ ಕಾಮತ್, ಡಾ.ಗಿರೀಶ್ ಭಾರದ್ವಾಜ್, ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಜಿಪಂ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಆಲೆಟ್ಟಿ ಗ್ರಾಪಂ ಅಧ್ಯಕ್ಷೆ ವೀಣಾ ವಸಂತ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ, ವರ್ತಕರ ಸಂ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಪಂ ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ, ಎಸ್.ಸಂಶುದ್ದೀನ್, ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ್ ಮೋಹನ್, ಆಲೆಟ್ಟಿ ಗ್ರಾಪಂ ಸದಸ್ಯರಾದ ಸುದೇಶ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು, ಅನಿತಾ ಇಡ್ಯಡ್ಕ ಭಾಗವಹಿಸಿದ್ದರು. ಸಂಸ್ಥೆಯ ಪಾಲುದಾರರಾದ ನಾರಾಯಣ ಕೇಕಡ್ಕ, ಸುಪ್ರೀತಾ ಕೇಕಡ್ಕ, ಕೃಷ್ಣ ಕಾಮತ್, ನಳಿನಿ ಕಾಮತ್ ಮತ್ತು ಮನೆಯವರು ಬರಮಾಡಿಕೊಂಡರು. ಬೂಡು ರಾಧಾಕೃಷ್ಣ ರೈ ಸ್ವಾಗತಿಸಿದರು. ಹೋಟೆಲ್ ಪಾಲುದಾರರಾದ ನಾರಾಯಣ ಕೇಕಡ್ಕ ವಂದಿಸಿದರು.