ಜಿಲ್ಲೆ

ವಾಮನ್ ರಾವ್ ಬೇಕಲ್ ದಂಪತಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ

ಕಾಸರಗೋಡು: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ, ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಕನ್ನಡ ಭವನ, ಕನ್ನಡ ಭವನ ಸಾರ್ವಜನಿಕ ವಾಚನಾಲಯದ ರೂವಾರಿ ಕೆ.ವಾಮನ್ ರಾವ್ ಬೇಕಲ್ ಹಾಗೂ ಪತ್ನಿ ಸಂಧ್ಯಾರಾಣಿ ದಂಪತಿಗೆ, ಶ್ರೀ ಸುಗುಣೇಂದ್ರ ಶ್ರೀಪಾದರು ಉಡುಪಿ ಶ್ರೀಕೃಷ್ಣ ಮಠದ ಪ್ರತಿಷ್ಠಿತ ಪ್ರಶಸ್ತಿಯಾದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.

ಗೀತಾ ಗಾಯನೋತ್ಸವ 50 ಕೃತಿಗಳ ಲೋಕಾರ್ಪಣೆ, ಸಾಹಿತ್ಯೋತ್ಸವ ಸಮಾರಂಭವನ್ನು ಶ್ರೀ ಸುಗುಣೇಂದ್ರ ಶ್ರೀಪಾದರು ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.

ಕಥಾಬಿಂದು ಪ್ರಕಾಶನದ ಅಧ್ಯಕ್ಷ ಪಿ.ವಿ.ಪ್ರದೀಪ್ ಕುಮಾರ್, ಸಂಚಾಲಕ ಡಾ.ಕೊಲಚಪ್ಪೆ ಗೋವಿಂದ ಭಟ್, ಯುಗಪುರುಷ ಭುವನಾಭಿರಾಮ ಮೊದಲಾದವರು ಉಪಸ್ಥಿತರಿದ್ದರು.