ಕುಂದಾಪುರ: ಮಕ್ಕಳು ಉತ್ತಮ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ದೇವತಾ ಕಾರ್ಯಗಳು ಮನಸ್ಸುಗಳನ್ನು ಒಂದು ಮಾಡುತ್ತವೆ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.
ಕುಂದಾಪುರ ತಾಲೂಕಿನ ಬಳ್ಕೂರು ಫ್ರೆಂಡ್ಸ್ ಯುವಕ ಮಂಡಲ ಕಳುವಿನ ಬಾಗಿಲು ಆಶ್ರಯದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಕರುಣಾಕರ ಬಳ್ಕೂರು ಅವರನ್ನು ಸನ್ಮಾನಿಸಲಾಯಿತು. ಅನ್ನದಾನ ಮಾಡಿರುವ, ಇತರ ಸೇವಾಕರ್ತರನ್ನು ಗೌರವಿಸಲಾಯಿತು. ವಕೀಲ ರವೀಶ್ಚಂದ್ರ ಶೆಟ್ಟಿ, ಫ್ರೆಂಡ್ಸ್ ಯುವಕ ಮಂಡಲ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಕಾರ್ಯದರ್ಶಿ ನಾಗೇಶ್ ಶೇರಿಗಾರ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿನಕರ ಬಳ್ಕೂರು, ಕಾರ್ಯದರ್ಶಿ ಅಶೋಕ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ದಿನಕರ ಬಳ್ಕೂರು ಸ್ವಾಗತಿಸಿದರು. ಯೋಗೀಶ್ ಬಳ್ಕೂರು ವಂದಿಸಿದರು.