ಕಿನ್ನಿಗೋಳಿ: ಶ್ರೀರಾಮ ನಾಮ ತಾರಕ ಮಂತ್ರದ ಫಲ ದೊಡ್ಡದು. ಈ ಅಭಿಯಾನವನ್ನು ನಾವು ಸಾರ್ಥಕ ಗೊಳಿಸಬೇಕಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಕಿನ್ನಿಗೋಳಿ ರಾಮ ಮಂದಿರ ಪ್ರಧಾನ ಅರ್ಚಕ ಗೀರೀಶ್ ಭಟ್ ಹೇಳಿದರು.
ಕಿನ್ನಿಗೋಳಿ ಶ್ರೀರಾಮ ಮಂದಿರದಲ್ಲಿ ಗೋಕರ್ಣ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಆಜ್ಞಾನುಸಾರವಾಗಿ ಆಯೋಜಿಸಲಾಗಿರುವ 550 ದಿನಗಳ ಸಾರ್ಧಪಂಚಶತಕೋಟಿ ರಾಮ ತಾರಕ ಮಂತ್ರ ಜಪ ಅಭಿಯಾನದಲ್ಲಿ ಮಾತನಾಡಿದರು.
ಅಭಿಯಾನದಲ್ಲಿ ಜಪ ಏ.17ರಂದು ಆರಂಭಗೊಂಡಿದ್ದು, 2025ರ ಅ.18ರವರೆಗೆ 550 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ಕಿನ್ನಿಗೋಳಿ ಜಿಎಸ್‌ಬಿ ಸಭಾದ ಅಧ್ಯಕ್ಷ ರಾಜೇಶ್ ನಾಯಕ್, ಮಂಜುನಾಥ ಮಲ್ಯ, ಮಾತೃ ಮಂಡಳಿಯ ಅಧ್ಯಕ್ಷೆ ಭಾರತೀ ಶೆಣೈ, ರಾಧಾ ಶೆಣೈ, ಸೀಮಾ ಭಟ್, ಸಂಧ್ಯಾ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.