ಕಂಪ್ಲಿಯ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವದ ನಿಮಿತ್ತ ಜರುಗಿದ ಮಧ್ಯಾರಾಧನೆಯ ಭಜನಾ ಕಾರ್ಯಕ್ರಮದಲ್ಲಿ ಗುರುರಾಜ ಸೇವಾ ಮಂಡಳಿ, ಶ್ರೀಸತ್ಯನಾರಾಯಣ ಮಹಿಳಾ ಭಜನಾವೃಂದದ ಮಹಿಳೆಯರು ಪಾಲ್ಗೊಂಡಿದ್ದರು. 
ಜಿಲ್ಲೆ

ಶ್ರದ್ಧಾಭಕ್ತಿಗಳಿಂದ ಸಾಗಿದ ರಾಯರ ಮಧ್ಯಾರಾಧನೆ

Kopala - Desk - Eraveni

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಮಧ್ಯಾರಾಧನೆ ಕಾರ್ಯಕ್ರಮಗಳು ಶುಕ್ರವಾರ ಶ್ರದ್ಧಾಭಕ್ತಿಗಳಿಂದ ಜರುಗಿದವು.

ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಸಹಿತ ಫಲ ಪಂಚಾಮೃತ, ಕನಕಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ, ಅಲಂಕಾರ, ಬ್ರಾಹ್ಮಣ ಸಂತರ್ಪಣೆ, ಸಂಜೆ ಪಲ್ಲಕ್ಕಿ ಸೇವೆ, ಸ್ವಸ್ತಿವಾಚನ, ತೊಟ್ಟಿಲು ಸೇವಾ, ಬ್ರಾಹ್ಮಣ ಸುವಾಸಿನಿಯರಿಂದ ಭಜನಾ ಕಾರ್ಯಕ್ರಮಗಳು ಜರುಗಿದವು.

ರಾಯರ ಬೃಂದಾವನವನ್ನು ಫಲಪುಷ್ಪಾಧಿಗಳಿಂದ ಶೃಂಗರಿಸಲಾಗಿತ್ತು. ಮಧ್ಯಾರಾಧನೆ ನಿಮಿತ್ತ ಪುಷ್ಪಾ ಪಾಂಡುರಂಗ ಕಾಗಲ್ಕರ್ ಕುಟುಂಬದವರು ಅನ್ನಸಂತರ್ಪಣೆ ಸೇವೆ ಒದಗಿಸಿದ್ದರು.

ವಿಚಾರಣಾಕರ್ತ ಟಿ.ಕೊಟ್ರೇಶ್, ವ್ಯವಸ್ಥಾಪಕ ಸಿಬ್ಬಂದಿ ಪುರುಷೋತ್ತಮ ಆಚಾರ್, ಕಿಶೋರ್ ಆಚಾರ್, ಶ್ರೀ ಸತ್ಯನಾರಾಯಣ ಮಹಿಳಾ ಭಜನಾವೃಂದದ ಪದಾಧಿಕಾರಿಗಳಾದ ದಿಗ್ಗಾವಿ ವಿಜಯಲಕ್ಷ್ಮೀ, ರಾಧಾ ಗೋಪಾಲಕೃಷ್ಣ, ಪೂರ್ಣಿಮಾ ಜೋಷಿ, ಶೋಭಾ ವ್ಯಾಸಾಚಾರ್‌ವ ಪಾಲ್ಗೊಂಡಿದ್ದರು.