ಅರಕೇರಾ ತಹಸಿಲ್ ಕಚೇರಿ ಮುಂಭಾಗದ ಅಂಗಡಿಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಉಪ ತಹಸೀಲ್ದಾರ್ ಮಹೋಹರ್ ನಾಯಕ ನೋಟಿಸ್ ನೀಡಿದರು. ಕಂದಾಯ ನಿರೀಕ್ಷಕ ಉಮಾಶಂಕರ, ಎಫ್‌ಡಿಸಿ ಶರಣಯ್ಯ ಸ್ವಾಮಿ, ವಿಷಯ ನಿರ್ವಾಹಕ ಕನಕರೆಡ್ಡಿ, ಸಿಬ್ಬಂದಿ ವೆಂಕಟೇಶ, ಕರಿಯಪ್ಪ ನಾಯಕ ಇತರರಿದ್ದರು. 
ಜಿಲ್ಲೆ

ಅಂಗಡಿಗಳ ತೆರವಿಗೆ ಕ್ರಮ

ಅರಕೇರಾ: ಪಟ್ಟಣದ ತಹಸಿಲ್ ಕಚೇರಿ ಮುಂದಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಉಪ ತಹಸೀಲ್ದಾರ್ ಮನೋಹರ್ ನಾಯಕ ಶುಕ್ರವಾರ ನೋಟಿಸ್ ನೀಡಿದರು.

ಆನ್‌ಲೈನ್ ಸೆಂಟರ್, ಜೆರಾಕ್ಸ್ ಅಂಗಡಿಗಳು ಕಚೇರಿ ಮುಂದೆ ಇಟ್ಟುಕೊಂಡಿರುವುದರಿಂದ ಸೌಲಭ್ಯಕ್ಕಾಗಿ ಕಚೇರಿಗೆ ಬರುವ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ವಿಶಾಲವಾದ ಸ್ಥಳವಿದ್ದರು ವಾಹನ ನಿಲುಗಡೆಗೆ ಜಾಗವಿಲ್ಲ. ಹೀಗಾಗಿ ಸಾರ್ವಜನಿಕರು ದೂರು ನೀಡಿದ್ದು, ಅದರನ್ವಯ ಅಂಗಡಿ ಮಾಲೀಕರಿಗೆ 7 ದಿನಗಳೊಳಗೆ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.

ಕರವೇ ಪದಾಧಿಕಾರಿಗಳಾದ ರಂಗಪ್ಪ ಗಾಲಿ, ಸಾಬಣ್ಣ ನಾಯಕ, ಶರಣಬೇರಿ, ಹನುಮಂತ್ರಾಯ, ಶಿವರಾಯ, ಕಂದಾಯ ನಿರೀಕ್ಷಕ ಉಮಾಶಂಕರ, ಎಫ್‌ಡಿಸಿ ಶರಣಯ್ಯ ಸ್ವಾಮಿ, ವಿಷಯ ನಿರ್ವಾಹಕ ಕನಕರೆಡ್ಡಿ, ಸಿಬ್ಬಂದಿ ವೆಂಕಟೇಶ, ಕರಿಯಪ್ಪ ನಾಯಕ ಇತರರಿದ್ದರು.