More

    ಹೋರಿ ಹಬ್ಬ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲಿ; ದೇಸಿ ಕ್ರೀಡೆಯನ್ನು ಪ್ರೋತ್ಸಾಹಿಸಿ; ಕಲಿವಾಳದಲ್ಲಿ ವಕೀಲ ಶರಣಬಸವ ಅಂಗಡಿ ಹೇಳಿಕೆ

    ಹಾವೇರಿ: ಮಂಗಳೂರಿನ ಕಂಬಳ, ಕೇರಳದ ಜಲ್ಲಿಕಟ್ಟು ಕ್ರೀಡೆಯಂತೆ ನಮ್ಮ ಹಾವೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ದೇಸಿ ಕ್ರೀಡೆ ಹೋರಿ ಹಬ್ಬ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಬೇಕು ಎಂದು ಶರಣಬಸವ ಲಾ ಫರ್ಮ್ ಚೇರ್ಮನ್, ವಕೀಲ ಶರಣಬಸವ ಅಂಗಡಿ ಅಭಿಪ್ರಾಯಪಟ್ಟರು.
    ಸವಣೂರ ತಾಲೂಕಿನ ಕಲಿವಾಳ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು ಮಾತನಾಡಿದರು. ಹೋರಿ ಹಬ್ಬದಂಥ ದೇಸಿ ಕ್ರೀಡೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಇದು ಎಂಟೆದೆ ಬಂಟರು ಆಡುವ ಆಟವಾಗಿದೆ. ಮೊಬೈಲ್, ಇಂಟರ್‌ನೆಟ್‌ನಲ್ಲಿ ಯುವಕರು ಕಳೆದು ಹೋಗುತ್ತಿರುವ ಸಂದರ್ಭದಲ್ಲೂ ಹೋರಿ ಹಬ್ಬ ಯುವಕರನ್ನು ತನ್ನತ್ತ ಸೆಳೆಯುತ್ತಿರುವುದನ್ನು ನೋಡಿದರೆ ಇದರ ಶಕ್ತಿ ಎಂತಹದ್ದು ಎಂದು ಅರ್ಥವಾಗುತ್ತದೆ. ಸ್ಪರ್ಧೆಯ ಸಂದರ್ಭದಲ್ಲಿ ಅನಾಹುತ ಸಂಭವಿಸದಂತೆ ಎಲ್ಲರೂ ಬಹಳ ಎಚ್ಚರಿಕೆಯಿಂದ ಆಟವಾಡಬೇಕು ಎಂದು ಸಲಹೆ ನೀಡಿದರು.
    ಆಯೋಜಕರು ಶರಣಬಸವ ಅಂಗಡಿ ಅವರನ್ನು ಸನ್ಮಾನಿಸಿದರು.
    ಕುಮಾರ ಮಹಾರಾಜ, ಚನ್ನವೀರಯ್ಯ ಮಠಪತಿ, ವೀರಣ್ಣ ದೇಸಾಯಿ, ಬಸವರಾಜ ನವಲಿ, ವಿರೂಪಾಕ್ಷಪ್ಪ ಕಲ್ಲೂರ, ಶೇಖಪ್ಪ ಶೀಲವಂತರ, ಹನುಮಂತಪ್ಪ ಹರಿಜನ, ತಿಪ್ಪಣ್ಣ ಹರಿಜನ, ಶರಣಪ್ಪ ಬಾರ್ಕಿ, ಸಂಗಪ್ಪ ಅಂಗಡಿ, ವೀರಣ್ಣ ಮಾಸನಕಟ್ಟಿ, ದ್ಯಾಮಣ್ಣ ಲಮಾಣಿ, ರಾಜು ಅಂಕಲಿ, ಸೇರಿದಂತೆ ಸಾವಿರಾರು ಹೋರಿ ಅಭಿಮಾನಿಗಳು ಪಾಲ್ಗೊಂಡಿದ್ದರು.
    ಭರ್ಜರಿ ಶಕ್ತಿ ಪ್ರದರ್ಶನ
    ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಹೋರಿಗಳು ಸ್ಪರ್ಧೆಯಲ್ಲಿ ಮಾತ್ರ ಎದುರಾಳಿಗಳ ಬೆವರಿಳಿಸುವಲ್ಲಿ ಯಶಸ್ವಿಯಾದವು. ಒಂದೊಂದು ಹೋರಿಯೂ ಕೂಡ ನಾ ಮುಂದು ತಾ ಮುಂದು ಎಂದು ಶಕ್ತಿ ಪ್ರದರ್ಶನ ನೀಡಿದವು. ಹೋರಿ ಸ್ಪರ್ಧೆ ಕಣ್ತುಂಬಿಕೊಳ್ಳಲು ಗ್ರಾಮಸ್ಥರು, ಸುತ್ತಮುತ್ತಲಿನ ಸಹಸ್ರಾರು ಜನರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts