ಜಿಲ್ಲೆ

Shivrajkumar 29ವರ್ಷಗಳ ಬಳಿಕ ಯಾಣಕ್ಕೆ ಬಂದು ನೆನಪಿಸಿಕೊಂಡ ಶಿವರಾಜಕುಮಾರ್‌

Uttara Kannada - Subash Hegde

ಕಾರವಾರ: ನಟ ಶಿವರಾಜಕುಮಾರ್‌ (Shivrajkumar) ವಿದೇಶದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ನಂತರ ಉತ್ತರ ಕನ್ನಡ ಪ್ರವಾಸ ಕೈಗೊಂಡಿದ್ದಾರೆ.

ಎರಡು ದಿನಗಳ ಹಿಂದೆ ಯಾಣಕ್ಕೆ ಬಂದ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಶಿವರಾಜ್‌ಕುಮಾರ್‌ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರು ಯಾಣದ ಭೈರವೇಶ್ವರ ಶಿಖರದ ಎದುರು ನಿಂತು ಫೋಟೋ ಹಂಚಿಕೊಂಡಿದ್ದಾರೆ. "ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂʼ

ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ ಎಂದು ಶಿವರಾಜ್‌ಕುಮಾರ್‌ ಬರೆದಿದ್ದಾರೆ.

Shivrajkumar

ಶಿವರಾಜ್‌ಕುಮಾರ್‌ ಅವರು ನಮ್ಮೂರ ಮಂದಾರ ಹೂವೆ ಸಿನಿಮಾದ ಸಂದರ್ಭದಲ್ಲಿ ತೆಗೆದ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಅದಕ್ಕೆ 111 ಕೆ ಜನ ವೀಕ್ಷಿಸಿದ್ದು, 1048 ಜನ ಅದನ್ನು ಶೇರ್‌ ಮಾಡಿದ್ದಾರೆ.