ನೆಲ್ಲಿಬೆಟ್ಟು ದಿ.ಕೆ ಶಿವರಾಮ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಸಾದ್ ಕುಮಾರ್ ಹಾಗೂ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ಶಿವರಾಮರ ಹೆಸರು ಸಮಾಜದಲ್ಲಿ ಚಿರಸ್ಥಾಯಿ

Karthika K.S

ಕೋಟ: ಸಮಾಜದಲ್ಲಿ ವಿಭಿನ್ನ ರೀತಿಯ ಚಟುವಟಿಕೆಗಳಿಂದ ಕೆ.ಶಿವರಾಮ ಅವರ ಹೆಸರು ಚಿರಸ್ಥಾಯಿಯಾಗಿದೆ ಎಂದು ಕೋಟದ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಗುಂಡ್ಮಿ ಹೇಳಿದರು.

ಸಾಲಿಗ್ರಾಮದ ಭೂಮಿಕಾದಲ್ಲಿ ನಡೆದ ದಿ.ಕೆ ಶಿವರಾಮ ನೆಲ್ಲಿಬೆಟ್ಟು ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವರಾಮ ಅವರ ಭಾವಚಿತ್ರಕ್ಕೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಸಹಿತ ಗಣ್ಯರು ಪುಷ್ಪಾರ್ಚನೆಗೈದರು. ಇಬ್ಬರು ಕಲಾ ಸಾಧಕರಾದ ಪ್ರಸಾದ್‌ಕುಮಾರ್ ಮೊಗೆಬೆಟ್ಟು ಹಾಗೂ ರಾಘವೇಂದ್ರ ಶಿರಿಯಾರ ಅವರನ್ನು ಸನ್ಮಾನಿಸಲಾಯಿತು.

ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಶಂಕರ್ ಎ.ಕುಂದರ್, ಟಿ.ಮಂಜುನಾಥ್ ಗಿಳಿಯಾರು, ಜಿ.ತಿಮ್ಮ ಪೂಜಾರಿ, ನರೇಂದ್ರ ಕುಮಾರ್ ಕೋಟ, ಎಚ್. ಜನಾರ್ದನ ಹಂದೆ, ಕೆ.ಅಚ್ಯುತ್ ಪೂಜಾರಿ, ಶಿವರಾಮ ಅವರ ಸಹೋದರರಾದ ತಮ್ಮಯ್ಯ, ರಾಜೇಶ್ ಉಪಸ್ಥಿತರಿದ್ದರು. ಗಣೇಶ್ ನೆಲ್ಲಿಬೆಟ್ಟು ಸ್ವಾಗತಿಸಿದರು. ಕೆ.ಚಂದ್ರಶೇಖರ್ ಸೋಮಯಾಜಿ ವಂದಿಸಿದರು. ಗೆಳೆಯರ ಬಳಗ ಉಪಾಧ್ಯಕ್ಷ ಶಶಿಧರ ಮಯ್ಯ ನಿರೂಪಿಸಿದರು.