ಜಿಲ್ಲೆ

ಕೋರ್ಟ್​ ಆದೇಶವಿದ್ರೂ ಹಿಜಾಬ್ ಧರಿಸಿ ಪ್ರತಿಭಟಿಸುತ್ತಿದ್ದ 58 ವಿದ್ಯಾರ್ಥಿಗಳು ಕಾಲೇಜಿನಿಂದ ಸಸ್ಪೆಂಡ್​

ಶಿವಮೊಗ್ಗ: ನ್ಯಾಯಾಲಯದ ಆದೇಶವಿದ್ದರೂ ಹಿಜಾಬ್ ಧರಿಸಿ ಬಂದು ಕಾಲೇಜಿನಲ್ಲಿ ನಿರಂತರವಾಗಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಶಿರಾಳಕೊಪ್ಪದ ಕರ್ನಾಟಕ ಪಬ್ಲಿಕ್ ಸ್ಕೂಲ್​ನ ಪದವಿಪೂರ್ವ ವಿಭಾಗದ 58 ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ತರಗತಿ ಒಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸುತಿದ್ದರು.

ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ. ಪ್ರತಿಭಟನೆ ನಡೆಸಬೇಡಿ ಎಂದು ಹೇಳಿದರೂ ಕೇಳದೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ 58 ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಪ್ರಾಂಶುಪಾಲರು ಸಸ್ಪೆಂಡ್ ಮಾಡಿದ್ದಾರೆ.

ಕಾಲೇಜಿಗೆ ಬಂದು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಬಳಿ ಕ್ಷಮೆ ಕೇಳಿದರೆ‌ ಸಸ್ಪೆಂಡ್ ಆದೇಶ ವಾಪಸ್ ಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ವಿದ್ಯಾರ್ಥಿಗಳ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ ಹಿನ್ನೆಲೆಯಲ್ಲಿ ಒಂಭತ್ತು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)