ಜಿಲ್ಲೆ

ಶಿವಾಜಿ ಮಹಾರಾಜರ ತ್ಯಾಗ ಅನುಕರಣೀಯ: ಶಾಸಕ ಉಮಾನಾಥ ಕೋಟ್ಯಾನ್ ಅಭಿಮತ

Manikya M

ಮೂಲ್ಕಿ: ಭಾರತದ ಅಖಂಡ ಪರಂಪರೆ, ಹಿಂದು ಸವಾಜದ ಉನ್ನತಿಗಾಗಿ ಶಿವಾಜಿ ಮಹಾರಾಜರ ತ್ಯಾಗ ಅನುಕರಣೀಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಭಾರತ ವಾತಾ ಸೇವಾ ಬ್ರಿಗೇಡ್ ವತಿಯಿಂದ ಬಪ್ಪನಾಡು ದೇವಸ್ಥಾನದ ವಠಾರದಲ್ಲಿ ನಡೆದ ಹಿಂದವೀ ಸ್ವರಾಜ್ಯದ ಗತವೈಭವದ ಚಾರಿತ್ರಿಕ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನದಲ್ಲಿ ಭಾರತ ವಾತೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಬಪ್ಪನಾಡು ದೇವಸ್ಥಾನದ ಅರ್ಚಕ ನರಸಿಂಹ ಭಟ್, ಜ್ಯೋತಿಷಿ ಉಷಾ ಭಟ್ ಮತ್ತು ವಿಶ್ವನಾಥ ಭಟ್ ಎಸ್.ಕೋಡಿ, ಕ.ಸಾ.ಪ. ವಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಮಯೂರಿ ಫೌಂಡೇಶನ್ ಸ್ಥಾಪಕ ಜಯಶೆಟ್ಟಿ, ಬಿಜೆಪಿ ಮುಖಂಡ ಈಶ್ವರ ಕಟೀಲು, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಯಶವಂತ ಸಾಲ್ಯಾನ್ ಮೂಲ್ಕಿ, ಉದ್ಯಮಿ ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಕಿನ್ನಿಗೋಳಿ ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಯೋಗ ಗುರು ಜಯಮುದ್ದು ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಬಳ್ಕುಂಜೆ, ಜನಾರ್ದನ್ ಬಂಗೇರ, ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ಸಂಜೀವ ದೇವಾಡಿಗ, ಭಾರತ ವಾತಾ ಸೇವಾ ಬ್ರಿಗೇಡ್ ಅಧ್ಯಕ್ಷ ನವೀನ್ ರಾಜ್, ಪದಾಧಿಕಾರಿಗಳಾದ ಸಂದೀಪ್ ಚಿತ್ರಾಪು, ವಿಠಲ್ ಎನ್., ಶೈಲೇಶ್ ಕುಮಾರ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಶ್ಯಾಮ್ ಪ್ರಸಾದ್, ವೀರಣ್ಣ ಅರಳಗುಂಡಿಗಿ, ಅಶೋಕ್ ಜನನಿ, ದಾನಿಗಳಾದ ರಂಗನಾಥ ಶೆಟ್ಟಿ, ಭಾನುಮತಿ ಶೆಟ್ಟಿ ಕಕ್ವಗುತ್ತು ಮತ್ತಿತರರಿದ್ದರು.

ಸುಧಾಮ ಫೌಂಡೇಶನ್ ಅಧ್ಯಕ್ಷ ಸುನಿಲ್ ಆಳ್ವ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು. ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು. ಬಳಿಕ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನಗೊಂಡಿತು.

ಹಿಂದು ಸವಾಜಕ್ಕಾಗಿ ಶಿವಾಜಿ ಮಹಾರಾಜರು ಸಾಕಷ್ಟು ತ್ಯಾಗ ಮಾಡಿದವರು ಅಂತಹ ಮಹಾರಾಜರ ಕಥೆಯನ್ನು ಸಮಾಜ ತಿಳಿಯಲು ವಿಜಯ ಕುಮಾರ್ ಕೊಡಿಯಾಲ್‌ಬೈಲು ಮುಂದಾಗಿದ್ದಾರೆ. ಕಳೆದ ಬಾರಿಯ ಶಿವದೂತೆ ಗುಳಿಗೆ ನಾಟಕ ಬಹಳ ಯಶಸ್ಸು ಕಂಡಿದ್ದು, ಇದೀಗ ಛತ್ರಪತಿ ಶಿವಾಜಿ ನಾಟಕವನ್ನು ನೀಡಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಉತ್ತಮ ಪ್ರಯತ್ನ ಯಶಸ್ವಿಯಾಗಲಿ. - ಉಮಾನಾಥ ಕೋಟ್ಯಾನ್, ಶಾಸಕ