ಉರುಸ್‌ನಿಂದ ಐಕ್ಯತೆ, ಸೌಹಾರ್ದತೆ ಪಸರಿಸಲಿ: ಸ್ಪೀಕರ್ ಯು.ಟಿ.ಖಾದರ್ ಆಶಯ

Ull_Darga
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಉಳ್ಳಾಲ ದರ್ಗಾದ ಉರುಸ್ ಮೂಲಕ ದರ್ಗಾದ ಪಾವಿತ್ರೃತೆ, ಉಳ್ಳಾಲ ಭಾಗದ ಜನರ ನಡುವಿನ ಐಕ್ಯತೆ, ಸೌಹಾರ್ದತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಆಶಿಸಿದರು.

ಖುತ್‌ಬುಝ್ಝಮಾನ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ(ಐ.ಸಿ) ತಂಙಳ್ 432ನೇ ವಾರ್ಷಿಕ, 22ನೇ ಪಂಚವಾರ್ಷಿಕ ಉರುಸ್ ಸಮಾರಂಭದ ಪ್ರಯುಕ್ತ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ದರ್ಗಾ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು.

ವಿವಿಧ ಯೋಜನೆಯಡಿ ಉಳ್ಳಾಲಕ್ಕೆ ಈಗಾಗಲೇ ಕೋಟ್ಯಂತರ ರೂ. ಅನುದಾನ ಮೀಸಲಿಡಲಾಗಿದೆ. ಉರುಸ್ ಹಿನ್ನೆಲೆಯಲ್ಲಿ ದರ್ಗಾ ಪದಾಧಿಕಾರಿಗಳು, ಜನಪ್ರತಿನಿಧಿಗಳ ಬೇಡಿಕೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಉರುಸ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದು ದರ್ಗಾದ ಪಾವಿತ್ರೃತೆ ಉಳಿಯಬೇಕು ಎಂದರು.

ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಶ್ರಫ್, ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕೋಶಾಧಿಕಾರಿ ನಾಝಿಂ, ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ನಗರಸಭೆ ಸದಸ್ಯರಾದ ವೀಣಾ ಶಾಂತಿ ಡಿಸೋಜ, ದೀಕ್ಷಿತಾ, ಬಾಝಿಲ್ ಡಿಸೋಜ, ಯು.ಎ.ಇಸ್ಮಾಯಿಲ್, ಜಬ್ಬಾರ್, ಅಝೀಝ್, ಅಬ್ದುಲ್ ರಶೀದ್ ಕೋಡಿ, ಮೋಂತಿ ಡಿಸೋಜ, ಪೌರಾಯುಕ್ತ ಮತ್ತಡಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಯು.ಕೆ.ಯೂಸುಫ್ ಉಳ್ಳಾಲ್, ಅಬ್ದುಲ್ ರಹ್ಮಾನ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು. ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ದುವಾ ನೆರವೇರಿಸಿದರು. ಉಳ್ಳಾಲ ನಗರಸಭೆ ನಿಕಟಪೂರ್ವ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ಕಾರ್ಯಕ್ರಮ ನಿರೂಪಿಸಿದರು.

ಉಳ್ಳಾಲ ದರ್ಗಾ ಕೇವಲ ಇಲ್ಲಿಗೆ ಮಾತ್ರ ಸೀಮಿತವಲ್ಲ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಿಂದ ಜನರು ಇಲ್ಲಿಗೆ ಬರುತ್ತಾರೆ. ಉರುಸ್ ಸಂದರ್ಭ ಊರಿನ ಸ್ವಚ್ಛತೆ, ಸೌಹಾರ್ದ, ಸೌಂದರ್ಯಕ್ಕೆ ಆದ್ಯತೆ ನೀಡಬೇಕು. ಇದು ಸರ್ವಧರ್ಮೀಯ ಸಮನ್ವಯತೆ ಕಾರ್ಯಕ್ರಮ ಆದಾಗ ಎಲ್ಲೆಡೆ ಉಳ್ಳಾಲದ ಕೀರ್ತಿ ಪಸರಿಸುತ್ತದೆ. - ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net