ಜಿಲ್ಲೆ

ಹಳಿಯಾಳದಲ್ಲಿ ಶಿವಬಸವ ಜಯಂತಿ ಆಚರಣೆ

Uttara Kannada - Subash Hegde

ಹಳಿಯಾಳ: ಧಾರ್ಮಿಕ ಸಹಿಷ್ಣತೆಯ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರಾಗಿದ್ದು ಎಲ್ಲರನ್ನೂ ಒಗ್ಗೂಡಿಸಿಕೊಂಡು ರಾಜ್ಯಭಾರ ಮಾಡಿದ ಶಿವಾಜಿ ಮಹಾರಾಜರು ಸರ್ವಕಾಲಕ್ಕೂ ಒಬ್ಬ ಅಜರಾಮರ ನಾಯಕ ಎಂದು ಮಾಜಿ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಮಿತಿ ಸದಸ್ಯ ಸುನಿಲ್ ಹೆಗಡೆ ಹೇಳಿದರು. 

ಶಿವಬಸವ ಜಯಂತಿ ಅಂಗವಾಗಿ ಗುರುವಾರ ಪಟ್ಟಣದ ಶ್ರೀಛತ್ರಪತಿ ಶಿವಾಜಿ ಮಹಾರಾಜ ಕಿಲ್ಲಾ  ಪ್ರದೇಶದಲ್ಲಿರುವ ಬೃಹತ್ ಅಶ್ವಾರೂಢ  ಶ್ರೀಛತ್ರಪತಿ ಶಿವಾಜಿ ಮಹಾರಾಜ ಮೂರ್ತಿಗೆ ಮಾಲಾರ್ಪಣೆ ಮಾಡಿ ಶಿವಾಜಿ ಜಯಂತಿ ಆಚರಿಸಿ ಅವರು ಮಾತನಾಡಿದರು. 

ಮರಾಠಾ ಸಮುದಾಯದವರು ಅಪ್ರತಿಮ ರಾಷ್ಟ್ರ ಭಕ್ತರು, ಮಹಾರಾಜರ ಅನುಯಾಯಿಗಳು ಎಂದ ಅವರು ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ್ದ ಹಿಂದವಿ ಸ್ವರಾಜ್ಯ ಉಳಿವಿಗಾಗಿ ನಾವೆಲ್ಲ ಸನಾತನ ಹಿಂದೂಗಳು ಕಂಕಣಬದ್ದರಾಗಬೇಕಿದೆ ಎಂದು ಕರೆ ನೀಡಿದರು‌. 

ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದ ಸುಮಾರು 20 ಕ್ಕೂ ಅಧಿಕ ಕಡೆ  ಶಿವಾಜಿ ಪ್ರತಿಮೆಗಳಿರುವ ಸ್ಥಳಗಳಿಗೆ ಭೆಟಿ ನೀಡಿ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ  ಜಯಂತಿ ಆಚರಣೆಯಲ್ಲಿ ಹೆಗಡೆ ಪಾಲ್ಗೊಂಡರು.‌

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲೂಕಾ ಅಧ್ಯಕ್ಷ ವಿಠ್ಠಲ ಸಿದ್ಧನ್ನವರ,  ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಕೆ.ಕೆ.ಎಂ.ಪಿ ಅಧ್ಯಕ್ಷ ಚೂಡಪ್ಪ ಬೋಬಾಟಿ, ಪ್ರಮುಖರಾದ ಪಾಂಡುರಂಗ ಪಾಟೀಲ್, ಪ್ರಶಾಂತ ನಾಯ್ಕ, ಮೋಹನ ಮೌಳಂಗಿ, ಮಾರುತಿ ಭೋಸಲೆ, ಜ್ಞಾನೇಶ ಮಾನಗೆ ಇತರರು ಇದ್ದರು.