ಮುಳ್ಳೇರಿಯ: ಭಗವಂತನೊಂದಿಗೆ ನಾವು ನಿತ್ಯ ಸಂಪರ್ಕ ಸಾಧಿಸುವಷ್ಟು ಧ್ಯಾನ ಮಾಡಬೇಕು. ದೇವರ ಕಾರ್ಯದಲ್ಲಿ ಯಾರೂ ಹಿಂದೆ ನಿಲ್ಲಬಾರದು. ಎಲ್ಲರೂ ಒಗ್ಗಟ್ಟಿನಿಂದ ಕ್ಷೇತ್ರ ಅಭಿವೃದ್ಧಿಯೆಂಬ ಲಕ್ಷೃದೊಂದಿಗೆ ಮುನ್ನಡೆಯಬೇಕು ಎಂದು ಮಂಗಳೂರು ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರ ಅಧ್ಯಕ್ಷ, ಉದ್ಯಮಿ ಮಧುಸೂದನ ಅಯರ್ ಹೇಳಿದರು.
ಅಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಡಿಸೆಂಬರ್ 29 ರಂದು ನಡೆಯಲಿರುವ ಶಿವಶಕ್ತಿ ಮಹಾಯಾಗದ ಸಮಾಲೋಚನಾ ಸಭೆಯಲ್ಲಿ ಭಾನುವಾರ ಮಾತನಾಡಿದರು.
ಶ್ರೀಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ರಾವ್ ಪಿಲಿಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಪೈಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಟ್ರಸ್ಟಿ ಕೃಷ್ಣನ್ ಚಾತಪ್ಪಾಡಿ, ಅರ್ಲಡ್ಕ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಪಿಲಿಕೂಡ್ಲು, ಪುಂಡೂರು ಗಣೇಶ ಮಂದಿರ ಟ್ರಸ್ಟ್ ಅಧ್ಯಕ್ಷ ದೇವಾನಂದ ಮಾಳಂಗಾಯಿ, ಪೈಕ ಶಾಲಾ ಪ್ರಬಂಧಕ ನಿತ್ಯಾನಂದ ನೆಲ್ಲಿತ್ತಳ, ನಿವೃತ್ತ ಶಿಕ್ಷಕ ಕುಂಞಂಬು, ಜಯನ್ ಕೋಟೂರು, ಮಾಧವನ್ ಆಚಾರಿ, ಕೃಷ್ಣರಾಜ ಪುಣಿಂಚಿತ್ತಾಯ, ರವಿಶಂಕರ ಪುಣಿಂಚಿತ್ತಾಯ, ಗೋಪಾಲ ಆಚಾರಿ, ರಾಮಚಂದ್ರ ವೋರ್ಕೂಡ್ಲು, ಕುಶಲನ್ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್ ಸ್ವಾಗತಿಸಿ. ಜೀರ್ಣೋದ್ಧಾರ ಸಮಿತಿ ಸದಸ್ಯ ರತ್ನಾಕರ ಆಳ್ವ ಪುಂಡೂರು ವಂದಿಸಿದರು.