ಜಿಲ್ಲೆ

ಶಿರೂರು ಗುಡ್ಡ ಕುಸಿತ (Landslide) 15 ದಿನದಲ್ಲಿ ಮರು ಕಾರ್ಯಾಚರಣೆ ಪ್ರಾರಂಭಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ!!

Uttara Kannada - Subash Hegde

ಕಾರವಾರ: ಶಿರೂರು ಗುಡ್ಡ ಕುಸಿತ (Landslide) ದುರಂತದಲ್ಲಿ ನಾಪತ್ತೆಯಾದ ಸ್ಥಳೀಯರಾದ ಲೋಕೇಶ ನಾಯ್ಕ, ಜಗನ್ನಾಥ ನಾಯ್ಕ ಅವರ ಹುಡುಕಾಟ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳದ ಪ್ರಮುಖ ರಾಜೇಂದ್ರ ನಾಯ್ಕ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಇನ್ನು 15ರಿಂದ 20 ದಿನದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸದೇ ಹೋದರೆ, ಜಿಲ್ಲಾ ಮಟ್ಟದಲ್ಲಿ ತೀವ್ರ ಪ್ರತಿಭಟನೆ ಮಾಡುತ್ತೇವೆ ಎಂದರು. ಘಟನೆ ನಡೆದು ಸುಮಾರು 100 ದಿನಗಳು ಕಳೆದಿವೆ. ಆದರೆ, ಇಬ್ಬರ ಶವ ಸಿಕ್ಕಿಲ್ಲ. ಹಿಂದು ಧಾರ್ಮಿಕ ವಿಧಿಯಂತೆ ಮೃತರ ಅಂತಿಮ ವಿಽಗಳನ್ನು ಇದುವರೆಗೂ ಮಾಡಿಲ್ಲ. ಗುಡ್ಗ ಕುಸಿತ ದಿಂದ ಗಾವಳಿ ನದಿಯ ನಡುವೆ ದೊಡ್ಡ ಪ್ರಮಾಣದ ಮಣ್ಣು ಬಿದ್ದಿದೆ. ಅದನ್ನು ಹಾಗೇ ಬಿಟ್ಟರೆ, ಶಿರೂರಿನ ಹಿಂದಿನ ಊರುಗಳಲ್ಲಿ ನೆರೆ ಸಂಭವಿಸುವ ಸಾಧ್ಯತೆ ಇದೆ. ದುರಮನತದಲ್ಲಿ ಜಿಲ್ಲಾಡಳಿತ ಇತರರ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿದ್ದು, ಸಂತೋಷ. ಆದರೆ, ಕೇರಳದ ಅರ್ಜುನನ ಹುಡುಕಾಟದಲ್ಲಿ ತೋರಿದ ಕಾಳಜಿಯನ್ನು ಸ್ಥಳೀಯ ಲೋಕೇಶ ಮತ್ತು ಜಗನ್ನಾಥ ಅವರ ಹುಡುಕಾಟದಲ್ಲಿ ತೋರುತ್ತಿಲ್ಲ. ಅರ್ಜುನನ ಮೃತ ದೇಹ ಲಾರಿ ಸಿಕ್ಕಿದ ನಂತರ ಮೂರೇ ದಿನ ಕಾರ್ಯಾಚರಣೆ ಮುಂದುವರಿಸಲಾಯಿತು. ರಾತ್ರೋರಾತ್ರಿ ಡ್ರಜ್ಜಿಂಗ್ ಯಂತ್ರ ನಾಪತ್ತೆಯಾಯಿತು. ಕಾರ್ಯಾಚರಣೆ ಮುಂದುವರಿಸಿದರೆ, ಮಣ್ಣು ಖಾಲಿಯಾಗುತ್ತಿತ್ತು. ಇಬ್ಬರ ದೇಹವೂ ಸಿಗುತ್ತಿತ್ತು ಎಂದರು.

ಕುಸಿತದಲ್ಲಿ Landslide ನಾಪತ್ತೆಯಾದವರ ಕುಟುಂಬದಲ್ಲಿ ಹಬ್ಬವಿಲ್ಲ

ರಾಷ್ಟ್ರೀಯ ಈಡಿಗ ಮಹಾ ಮಂಡಳಿ ಅಂಕೋಲಾ ಅಧ್ಯಕ್ಷ ದಾಮೋದರ ಜಿ.ನಾಯ್ಕ ಮಾತನಾಡಿ, ನಾಪತ್ತೆಯಾದವರ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಅಂಥ ಕುಟುಂಬಗಳಲ್ಲಿ ಹಿಂದು ಪದ್ಧತಿಯಂತೆ ಹಬ್ಬ, ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಕುಟುಂಬಸ್ಥರ ಗೋಳನ್ನು ಅರ್ಥ ಮಾಡಿಕೊಂಡು ಜಿಲ್ಲಾಡಳಿತ ಮರು ಕಾರ್ಯಾಚರಣೆ ಪ್ರಾರಂಭಿಸಬೇಕು ಎಂದರು.

ಅಂಕೋಲಾ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ನಾಗೇಶ ವಿ.ನಾಯ್ಕ, ಯುವ ನಾಮಧಾರಿ ಸಂಘದ ಅಧ್ಯಕ್ಷ ಗಜು ಆರ್.ನಾಯ್ಕ, ಪ್ರಶಾಂತ ನಾಯ್ಕ, ಶ್ರೀಪಾದ ಟಿ.ನಾಯ್ಕ, ಶ್ರೀಧರ ಎಸ್.ನಾಯ್ಕ,ನಾಗರಾಜ ಬಿ.ನಾಯ್ಕ,ವಿಜಯ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.