ಶಿವಮೊಗ್ಗ: ಇಂದಿರಾನಗರ ಶ್ರೀರಾಮನಗರ ರಸ್ತೆ ಪಕ್ಕದ ಲೇಔಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿಶೀಟರ್‌ನನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ 90 ಸಾವಿರ ರೂ. ಮೌಲ್ಯದ 1.100 ಕೆಜಿ ಗಾಂಜಾ ಮತ್ತು 700 ರೂ. ನಗದು ಜಪ್ತಿ ಮಾಡಿದ್ದಾರೆ.
ತಾಲೂಕಿನ ಕಡೇಕಲ್ ಗ್ರಾಮದ ನಿವಾಸಿ, ರೌಡಿಶೀಟರ್ ಅಬೀದ್ ಖಾನ್ ಅಲಿಯಾಸ್ ಕಡೇಕಲ್ ಅಬೀದ್ (35) ಬಂಧಿತ. ಭಾನುವಾರ ಶ್ರೀರಾಮನಗರ ರಸ್ತೆ ಪಕ್ಕದ ಲೇಔಟ್‌ನಲ್ಲಿ ಗಾಂಜಾ ಸಂಗ್ರಹಿಸಿಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಜಿ.ತಿರುಮಲೇಶ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆದಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಖ್ಯ ಪೇದೆ ಸೋಮನಾಯ್ಕ, ಪೇದೆಗಳಾದ ಲಂಕೇಶ್‌ಕುಮಾರ್, ಅರಿಹಂತ ಶಿರಹಟ್ಟಿ, ಪ್ರಶಾಂತ್‌ಕುಮಾರ್, ಅರುಣ್‌ಕುಮಾರ್, ಜಗದೀಶ್ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.