ಬೆಳ್ತಂಗಡಿ: ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಗಳ ರಾಜ್ಯಮಟ್ಟದ ಮಾಸ್ಟರ್(ನಾಯಕ) ಮತ್ತು ಕ್ಯಾಪ್ಟನ್(ಉಪನಾಯಕ)ಗಳ ತರಬೇತಿ ಕಾರ್ಯಾಗಾರ ಸೆ.17,18ರಂದು ಉಜಿರೆಯ ಜಾಗೃತಿ ಸೌಧ(ಟಿ.ಬಿ.ಆಸ್ಪತ್ರೆ )ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯಲಿದೆ.
ರಾಜ್ಯಾದ್ಯಂತ 91 ಶೌರ್ಯ ತಾಲೂಕು ಸಮಿತಿಗಳ 180 ಮಂದಿ ಭಾಗವಹಿಸಲಿದ್ದಾರೆ. ಅವರಿಗೆ ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ಜಿಲ್ಲಾ ವಿಪತ್ತು ನಿರ್ವಹಣಾ ಕೋಶ ಮತ್ತು ವಿಶೇಷ ಪರಿಣತರಿಂದ 2 ದಿನಗಳ ಸಾಮರ್ಥ್ಯಾಭಿವೃದ್ಧಿ ತರಬೇತಿ ನಡೆಯಲಿದೆ. 17ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ತಹಸೀಲ್ದಾರ್ ಪೃಥ್ವಿ ಸಾನಿಕಮ್, ಶಾಂತಿಲಾಲ್ ಜಟಿಯಾ, ಟೀಂ ಕಮಾಂಡರ್, ಎನ್ಡಿಆರ್ಎಫ್, ಗುಂಟೂರು, ಆಂಧ್ರಪ್ರದೇಶ, ವಿಜಯ್ ಕುಮಾರ್ ಪೂಜಾರ್ವಿಪತ್ತು ನಿರ್ವಹಣಾ ಅಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಕೋಶ, ದ.ಕ. ಜಿಲ್ಲೆ, ಸಂತೋಷ್ ಪೀಟರ್ ಡಿಸೋಜ, ತರಬೇತುದಾರರು ಮತ್ತು ಕಾನೂನು ಸಲಹೆಗಾರರು, ಉಷಾ ಫೈರ್ ಸೇಫ್ಟಿ ಕಂಪನಿ ಮಂಗಳೂರು, ಶ್ರಿ.ಧ.ಮ.ಮೆಡಿಕಲ್ ಟ್ರಸ್ಟ್ ಧರ್ಮಸ್ಥಳ ಕಾರ್ಯದರ್ಶಿ ಶಿಶುಪಾಲ್ ಪೂವಣಿ, ಭಾಗವಹಿಸಲಿದ್ದಾರೆ.
18ರಂದು ಸಂಜೆ 4ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಕಚೇರಿ ಧರ್ಮಸ್ಥಳದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ಡಿ.ವೀರೇಂದ್ರ ಹೆಗ್ಗಡೆ, ಧ.ಗ್ರಾಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಮುಖ್ಯ ಹಣಕಾಸು ನಿರ್ದೇಶಕ ಶಾಂತಾರಾಮ ಪೈ., ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾೃಸ್ ಭಾಗವಹಿಸಲಿದ್ದಾರೆ.