ಕಾರವಾರ:ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಭಾಗಗಳಲ್ಲಿ ಕೈಗೊಳ್ಳುತ್ತಿರುವ ಶರಾವತಿ ಭೂಗತ ಜಲವಿದ್ಯುತ್‌ಯೋಜನೆಗೆ ವನ್ಯಜೀವಿ, ಪರಿಸರ ಅನುಮತಿ ನೀಡದಂತೆ ವೃಕ್ಷ ಲಕ್ಷ ಆಂದೋಲನ ಸಮಿತಿ ಕೇಂದ್ರ ಅರಣ್ಯ ಮಂತ್ರಾಲಯಕ್ಕೆ ಮನವಿ ಮಾಡಿದೆ.
ಶರಾವತಿ ಅಭಿಯಾರಣ್ಯ ಈಗಾಗಲೇ ಅಪಾಯದ ಅಂಚಿನಲ್ಲಿದೆ. ಬೃಹತ್ ರಸ್ತೆ ನಿರ್ಮಾಣ ಗಣಿಗಾರಿಕೆಗಳಿಂದ ನಲುಗುತ್ತಿದೆ. ಅಭಿಯಾರಣ್ಯದ ಸುತ್ತ ರೆಸಾರ್ಟ್ಗಳು, ಬೇಕಾಬಿಟ್ಟಿ ವಸತಿಗಳು, ಪ್ಲಾಸ್ಟಿಕ್ ಮಾಲಿನ್ಯ ಇವುಗಳ ಹಾವಳಿಯಿಂದ ರೈತರು ವನ್ಯಜೀವಿಗಳು ಅತಂತ್ರವಾಗಿವೆ. ಮಂಗನ ಕಾಯಿಲೆಯು ಕಣಿವೆಯಲ್ಲಿ ನದಿ ತೀರದ ಹಳ್ಳಿಗಳಲ್ಲಿ ವಿಜೃಂಭಿಸುತ್ತಿದೆ. ಅಭಯಾರಣ್ಯದ ರೈತರು ಕಂಗಾಲಾಗಿ ಪರಿಹಾರ ನೀಡಿ ಊರು ತೊರೆಯುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನೀರೇ ಇಲ್ಲದೆ ಲಿಂಗನಮಕ್ಕಿ ಜಲವಿದ್ಯುತ್ ಯೋಜನೆ ವಿದ್ಯುತ್ ಉತ್ಪಾದನೆ ನಿಲ್ಲಿಸುವ ಪರಿಸ್ಥಿತಿ ಬರಲಿದೆ.
ಈ ಯೋಜನೆ ಜಾರಿಯಿಂದ ಹೊನ್ನಾವರ ತಾಲೂಕಿನ ನದಿ ದಂಡೆಯ ಲಕ್ಷ ರೈತರು, ಮೀನುಗಾರರ ಬದುಕು ಅತಂತ್ರ ಮಾಡಲಿದೆ. ಗೇರು ಸೊಪ್ಪಾವರೆಗೆ ಸಮುದ್ರದ ಉಪ್ಪು ನೀರು ಸುಗ್ಗುವ ಅಪಾಯವಿದೆ. ಹೀಗಿರುವಾಗ ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಜಾರಿಗೆ ಏಕೆ ಆತುರ ಎಂದು ಸಮಿತಿ ಪ್ರಶ್ನಿಸಿದೆ.
ಪುನಃ ಶರಾವತಿ ಕಣಿವೆಯಲ್ಲಿ ಸುರಂಗ ತೋಡುವ ಹುಚ್ಚು ಸಾಹಸ ಮಾಡಬೇಡಿ, ಗೇರುಸೊಪ್ಪಾ ಯೋಜನೆಯಿಂದ ಕೆಳಗೆ ಸಿಹಿ ನೀರು ನದಿಗೆ ಬಿಟ್ಟು ಕೆಳ ಹಂತದ ರೈತರು ಮೀನುಗಾರರನ್ನು ಬದುಕಲು ಬಿಡಿ ಎಂದು ಸಮಿತಿ ರಾಜ್ಯ ಅರಣ್ಯ ಸಚಿವರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ (ಅರಣ್ಯ ರಕ್ಷಣಾ ವಿಭಾಗ) ಮನವಿ ಮಾಡಿದೆ.
ಯೋಜನೆ ಜಾರಿಗೂ ಮುನ್ನ ಗೇರುಸೊಪ್ಪ, ಹೊನ್ನಾವರ, ಸಾಗರಗಳಲ್ಲಿ ಸಾರ್ವಜನಿಕ ಅಹವಾಲು ಸಭೆಗಳನ್ನು ನಡೆಸಬೇಕು ಎಂದು ಯೋಜನೆ ಜಾರಿಗೆ ಮುಂದಾಗಿರುವ ಕೆಪಿಸಿಗೆ ಅರಣ್ಯ ಇಲಾಖೆ ಮುಖ್ಯಸ್ಥರಿಗೆ ವೃಕ್ಷ ಆಂದೋಲನದ ಅತನಂತ ಹೆಗಡೆ ಅಶೀಸರ, ಸಂಚಾಲಕ ಕೆ.ಗಣಪತಿ ಮನವಿ ಮಾಡಿದ್ದಾರೆ.
ಶರಾವತಿ ನದಿಯಿಂದ ಹೊನ್ನಾವರ, ಭಟ್ಕಳ ತಾಲೂಕುಗಳ ವಿವಿಧ ಗ್ರಾಮ, ಶಹರಗಳಿಗೆ ನೀರು ಪೂರೈಸಲಾಗುತ್ತಿದ್ದು, ಯೋಜನೆ ವಿಫಲವಾಗುವ ಸಾಧ್ಯತೆ ಇದೆ. ಹೊನ್ನಾವರದ ನದಿ ದಂಡೆಯ ರೈತರಿಗೆ ಸಿಹಿ ನೀರು ಸಿಗುವುದಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆ ಈಗಾಗಲೇ ಈ ಬಗ್ಗೆ ವಿಸ್ತçತ ಅಧ್ಯಯನ ನಡೆಸಿ, ಹೊಸ ಯೋಜನೆಗಳು ಬೇಡ ಎಂದು ಹೇಳಿದೆ. ಉತ್ತರ ಕನ್ನಡ ಜಿಲ್ಲೆಯ ಶರಾವತಿ, ಬೇಡ್ತಿ, ಕಾಳನಿ ಕಣಿವೆಗಳ ಧಾರಣಾ ಸಾಮರ್ಥ್ಯ ಮುಗಿದಿದೆ. ಎಂದು 2013-14 ರಲ್ಲಿ ಐಐಎಸ್‌ಸಿ ವರದಿ ನೀಡಿದೆ. ಯಾವುದೇ ಪರವಾನಗಿ ಪಡೆಯದೇ ಯೋಜನೆಗೆ ಟೆಂಡರ್ ಕರೆದಿರುವುದು ಹೇಗೆ ಎಂಬ ಪ್ರಶ್ನೆ ಮೂಡಿದೆ ಎಂಬುದು ಸೇರಿ ಇನ್ನೂ ಹಲವು ಅಂಶಗಳನ್ನು ವರದಿಯಲ್ಲಿ ಸೇರಿಸಲಾಗಿದೆ.
1) ಕರಾವಳಿ ರೈತರಿಗೆ ಸಿಹಿ ನೀರಿಲ್ಲ : ಪಶ್ಚಿಮಘಟ್ಟದ ನದಿಗಳ ನೀರಿನ ಹರಿವು ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಶರಾವತಿ ಟೇಲರೇಸ್ ವಿದ್ಯುತ್ ಕೇಂದ್ರದಿAದ ಹೊರಬಿಡುವ ನೀರನ್ನು ಪಂಪ್ ಮಾಡಿ ತಳಕಳಲೆಗೆ ಸಾಗಿಸುವ ಕಾರಣದಿಂದ ಗೇರುಸೊಪ್ಪೆಯಿಂದ ಶರಾವತಿ ನದಿಯ ಕೆಳಭಾಗಕ್ಕೆ ನೀರೇ ಹರಿಯದಂತಹ ಪರಿಸ್ಥಿತಿ ನರ‍್ಮಾಣ ಆಗಲಿದೆ. ಇದರಿಂದ ಗೇರುಸೊಪ್ಪ- ಹೊನ್ನಾವರವರೆಗಿನ ನದಿಯ ಎರಡೂ ದಂಡೆಯ ರೈತರಿಗೆ & ಮೀನುಗಾರರಿಗೆ ಸಿಹಿ ನೀರು ಸಿಗುವುದಿಲ್ಲ. ಉಪ್ಪುನೀರು ಗೇರು ಸೊಪ್ಪವರೆಗೆ ತಲುಪಲಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ.
2) ಈ ಯೋಜನೆ ಜಾರಿಯಿಂದ ಹೊನ್ನಾವರ & ಭಟ್ಕಳಕ್ಕೆ ಶರಾವತಿ ಕುಡಿಯುವ ನೀರಿನ ಯೋಜನೆಗಳು ವಿಫಲವಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.
3) ಹೊಸ ಯೋಜನೆಬೇಡ : ಕರ್ನಾಟಕ ಪವರ್ ಕಾರ್ಪೋರೇಶನ್ ಪ್ರಾಯೋಜಿಸಿದ್ದ ಶರಾವತಿ ಕಣಿವೆಯ ಸಮಗ್ರ ಪರಿಸರ ಪರಿಸ್ಥಿತಿ ಅಧ್ಯಯನ ನಡೆಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಬಹು ಮಹತ್ವದ ವರದಿ 15 ವರ್ಷ ಹಿಂದೆ ಬೃಹತ್ ಜಲ ವಿದ್ಯುತ್ ಹೊಸ ಯೋಜನೆ ಜಾರಿ ಬೇಡ ಎಂದೇ ಹೇಳಿದೆ.
4) ಧಾರಣ ಸಾಮರ್ಥ್ಯ ಮುಗಿದಿದೆ : ಜೀವವೈವಿಧ್ಯ ಮಂಡಳಿ ಪ್ರಾಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಭೂಧಾರಣ ಸಾಮರ್ಥ್ಯ ಅಧ್ಯಯನ ನಡೆಸಿದ್ದ ಐ.ಐ,ಎಸ್,ಸಿ. 2013 -14 ರಲ್ಲಿ ಸರ್ಕಾರಕ್ಕೆ ವರದಿ ನೀಡಿದೆ. ಶರಾವತಿ, ಬೇಡ್ತಿ, ಕಾಳಿ ನದಿ ಕಣಿವೆಗಳ ಪರಿಸರಧಾರಣ ಸಾಮರ್ಥ್ಯ ಮುಗಿದಿದೆ ಎಂದೇ ವರದಿ ಸಲ್ಲಿಸಿದೆ. ಎಂಬ ಅಂಶವನ್ನು ಇಲ್ಲಿ ಎತ್ತಿ ಹೇಳಲಾಗಿದೆ.
5) ಅರಣ್ಯ – ವನ್ಯಜೀವಿ ಪರವಾನಿಗೆ ಇಲ್ಲ : ವನ್ಯ ಜೀವಿ ಮಂಡಳಿ ರಾಷ್ಟಿçÃಯ ಪರಿಸರ – ಅರಣ್ಯ ಮಂತ್ರಾಲಯಗಳು, ಕರ್ನಾಟಕ ಅರಣ್ಯ ಇಲಾಖೆ, ರಾಜ್ಯ ವನ್ಯ ಜೀವಿ ಮಂಡಳಿ ರಾಜ್ಯ ಜೀವವೈವಿಧ್ಯ ಮಂಡಳಿಗಳ ಅನುಮತಿ ಪಡೆಯದೇ ಸರ್ಕಾರ – ಕೆ.ಪಿ.ಸಿ. ಸಂಸ್ಥೆ ಹೇಗೆ ಯೋಜನೆ ಜಾರಿಗೆ ಮುಂದಾಗಲು ಸಾಧ್ಯ ಎಂಬ ಕಾನೂನು ಪ್ರಶ್ನೆಯನ್ನು ಪರಿಸರ ಕಾನೂನು ತಜ್ಞರು ಎತ್ತಿದ್ದಾರೆ.
6) ಈ ಹಿಂದೆ 1990ರ ದಶಕದಲ್ಲಿ ಶರಾವತಿ ಟೇಲರೇಸ್ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಬಹಳ ಹಣ ಯೋಜನೆಗೆ ವೆಚ್ಚವಾಗಿದೆ ಅನುಮತಿ ಕೊಡಿ ಎಂದು ಕೆ.ಪಿ.ಸಿ ಮನವಿ ಮಾಡಿತ್ತು. ಈಗಿನ ಸಂದರ್ಭದಲ್ಲಿ ಅರಣ್ಯ ಅನುಮತಿ ಇಲ್ಲದೇ ಕಾಮಗಾರಿ ಪ್ರಾರಂಭಿಸುತ್ತೀರಾ ಎಂದು ಪರಿಸರ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
7) ಭೂ ಕುಸಿತ ಪ್ರದೇಶ: ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಭಾರೀ ಭೂ ಕುಸಿತ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯ ಸರ್ಕಾರವೇ ನಿಯುಕ್ತಿ ಮಾಡಿದ್ದ ಭೂ ಕುಸಿತ ಅಧ್ಯಯನ ಸಮೀತಿ 2021 ರಲ್ಲೇ ವರದಿ ನೀಡಿದೆ. ಶರಾವತಿ ಕಣಿವೆ ಈಗಾಗಲೇ ಭಾರಿ ಭೂ ಕುಸಿತದ ಅವಘಡಗಳಿಗೆ ಸಿಲುಕಿದೆ. ಇಲ್ಲಿ ಗುಡ್ಡ ಕಟಾವು, ಸುರಂಗ, ಭಾರೀ ರಸ್ತೆ, ಗಣಿಗಾರಿಕೆ, ಜೆ.ಸಿ.ಬಿ. ಕಾಮಗಾರಿಗಳನ್ನು ಘಟ್ಟ ಪ್ರದೇಶದಲ್ಲಿ ನಿಷೇಧಿಸಬೇಕು ಎಂದು ಈ ತಜ್ಞ ವರದಿ ಅಭಿಪ್ರಾಯ ನೀಡಿದೆ.
ಈ ಹಿನ್ನೆಲೆಯಲ್ಲಿ ಭೂಮಿ ಅಡಿಯಲ್ಲಿ ಕಾಮಗಾರಿ ನಡೆಸುವ ಶರಾವತಿ ಯೋಜನೆ ಖಂಡಿತಾ ಸಾಧು ಅಲ್ಲ. ಈ ಗಂಭೀರ ಸಂಗತಿಗಳನ್ನು ಕಂದಾಯ, ಅರಣ್ಯ, ಇಂಧನ ಇಲಾಖೆ ಮುಖ್ಯಸ್ಥರು ಪರಿಗಣಿಸಿ ಭೂಗತ ಯೋಜನೆ ಕೈಬಿಡಬೇಕು.
8) ಬದಲೀ ಇಂಧನ ಯೋಜನೆ ಜಾರಿ ಮಾಡಿ: ದೇಶದಲ್ಲಿ, ರಾಜ್ಯದಲ್ಲಿ ಸೌರವಿದ್ಯುತ್ ಸೇರಿದಂತೆ ಹಲವು ಸುಸ್ಥಿರ ಇಂಧನ ಅಭಿವೃದ್ಧಿ ಯೋಜನೆಗಳಿವೆ. ಪುನಃ ಶರಾವತಿ ಕಣಿವೆಯಲ್ಲಿ ಬೃಹತ್ ಯೋಜನೆ ರೂಪಿಸಿದ್ದೇಕೆ ? ವಿದ್ಯುತ್ ಉತ್ಪಾದನೆಗಿಂತ ಹೆಚ್ಚು ವಿದ್ಯುತ್ ನೀರು ಎತ್ತಿ ಸಾಗಿಸಲು ಬೇಕೆ ? ಈ ಯೋಜನೆ ಲಾಭದಾಯಕ ಅಲ್ಲ ಎಂದು ಇಂಧನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
9) ಆರ್ಥಿಕವಾಗಿ ಹಾನಿಕಾರಕ: ಪಾರಿಸಾರಿಕ ಮೌಲ್ಯ ಲೆಕ್ಕ ಮಾಡಿಲ್ಲ. ವನ್ಯಜೀವಿ, ಅರಣ್ಯ, ಜೀವವೈವಿಧ್ಯ ನಾಶ ಲೆಕ್ಕ ಸೇರಿಸಿ ಡಿ.ಪಿ.ಆರ್. ಮಾಡಿದ್ದೀರಾ ?
10) ಜಲಾನಯನ ಬರಿದಾಗಿದೆ: ಕರ್ನಾಟಕ ಪವರ್ ಕಾರ್ಪೋರೇಶನ್ ರಾಜ್ಯದ ನೀರಾವರಿ ಅಣೆಕಟ್ಟು ಇರುವ ಸ್ಥಳಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಮುಂದಾಗಬೇಕು. ಶರಾವತಿ ಜಲಾನಯನದ ಹಸಿರು ಸಮೃದ್ಧಿ ನಾಶವಾಗಿರುವ ಇಂದಿನ ಸಂಧರ್ಭದಲ್ಲಿ ಕಣಿವೆಯ ಅಳಿದುಳಿದ ನಿಸರ್ಗ ಸಂಪತ್ತಿನ ಉಳಿವಿಗೆ ಕೆ.ಪಿ.ಸಿ ಬೆಂಬಲ ನೀಡಬೇಕು. ನೀರೇ ಇಲ್ಲದ ಲಿಂಗನಮಕ್ಕಿ ಅಣೆಕಟ್ಟು ವಾಸ್ತವವನ್ನು ತೆರೆದಿಟ್ಟಿದೆ. ಹೂಳು ತುಂಬಿರುವ ಅಣೆಕಟ್ಟು ಸುಸ್ಥಿರ ಮಾಡಲು ಕೆ.ಪಿ.ಸಿ ಮುಂದಾಗಬೇಕು .ಈಗ ಇರುವ ಶರಾವತಿ ಯೋಜನೆಗಳ ದಕ್ಷತೆ ಹೆಚ್ಚಿಸಲು ಕೆ.ಪಿ.ಸಿ. ಗಮನ ನೀಡಬೇಕು