ಜಿಲ್ಲೆ

ಟಿಎಸ್ಎಸ್ ಶಾಂತಣ್ಣ ಇನ್ನಿಲ್ಲ

Uttara Kannada - Subash Hegde

ಶಿರಸಿ: ಸಹಕಾರಿ ಧುರೀಣ, ಟಿಎಸ್ ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ‌ ಹೆಗಡೆ ಶೀಗೆಹಳ್ಳಿ (79) ಬುಧವಾರ ನಿಧನ ಹೊಂದಿದರು.
ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅವರು ಸುದೀರ್ಘ ಕಾರ್ಯ ನಿರ್ವಹಿಸಿದ್ದರು. ಒಮ್ಮೆ ಶಿರಸಿ ಅಂಕೋಲಾ ಕ್ಷೇತ್ರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ವಿಧಾನಸಭೆ ಚುನಾವಣೆ ಸ್ಪರ್ಧಿಸಿ, ಸೋಲು ಕಂಡಿದ್ದರು‌
ಸುಧೀರ್ಘ ಅವಧಿಗೆ ಶಿರಸಿ ಟಿಎಸ್ ಎಸ್ ಅಧ್ಯಕ್ಷರಾಗಿದ್ದ ಅವರು ರೈತರಿಗೆ ಅಗತ್ಯ ವಸ್ತುಗಳು ಸಿಗುವ ಸೂಪರ್ ಮಾರ್ಕೆಟ್ ತೆರೆದು ಸಂಸ್ಥೆ ಪ್ರಸಿದ್ಧರಾಗಲು ಕಾರಣರಾಗಿದ್ದರು.

ಸರಳ, ಸಜ್ಜನ ನಡೆಯಿಂದ ಅವರು ಶಾಂತಣ್ಷ ಎಂದೇ ಪ್ರಸಿದ್ಧರಾಗಿದ್ದರು. ಕೆಲವರ್ಷಗಳಿಂದ ಅವರು ಅನಾರೋಗ್ಯಕ್ಕೊಳಗಾಗಿದ್ದರು.
ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.