ಕಾಸರಗೋಡು: ಒಂಬತ್ತರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪನಯಾಲ ಎಣ್ಣೆಪಾರ ನಿವಾಸಿ, ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಎಂ.ಕೆ ಜಾನ್ ಯಾನೆ ತಂಗಪ್ಪನ್(62)ಎಂಬಾತನನ್ನು ಬೇಕಲ ಡಿವೈಎಸ್‌ಪಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಜುಲೈ 21ರಂದು ಘಟನೆ ನಡೆದಿದ್ದು, ಸಂಬಂಧಿಕರ ಮನೆಗೆ ಆಗಮಿಸಿದ ಬಾಲಕಿಯನ್ನು ಆಮಿಷವೊಡ್ಡಿ ಕರೆದೊಯ್ದು ಕಿರುಕುಳಕ್ಕೆ ಯತ್ನಿಸಲಾಗಿತ್ತು. ಬಾಲಕಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಅನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯ ಈತನಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.