ಗಂಗೊಳ್ಳಿ : ವಿಜಯ ಗ್ರಾಮೀಣ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಆಶ್ರಯ ಹೊಲಿಗೆ ತರಬೇತಿ ಕೇಂದ್ರ ಗಂಗೊಳ್ಳಿ ಸಹಯೋಗದಲ್ಲಿ 10 ದಿನಗಳ ಆರಿ ಎಂಬ್ರಾಯ್ಡರಿ ತರಬೇತಿ ಉದ್ಘಾಟನಾ ಸಮಾರಂಭ ಗಂಗೊಳ್ಳಿಯ ಆಶ್ರಯ ಹೊಲಿಗೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ವಿಜಯ ಗ್ರಾಮೀಣ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಭಾರತೀಯ ವಿಕಾಸ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ, ಬ್ಯಾಂಕ್ ಆಫ್ ಬರೋಡಾ ತಲ್ಲೂರು ಬ್ರಾಂಚ್ ಮ್ಯಾನೇಜರ್ ಗಿರೀಶ್ ಐತಾಳ್, ಆಶ್ರಯ ಹೊಲಿಗೆ ತರಬೇತಿ ಕೇಂದ್ರದ ಮುಖ್ಯಸ್ಥೆ ರೇಖಾ ಖಾರ್ವಿ, ಶಾಂತಿ ನಾಗೇಶ್ ಖಾರ್ವಿ, ಶಾಂತಿ ಗೋಪಾಲ್ ಖಾರ್ವಿ, ತರಬೇತುದಾರೆ ಆರತಿ ರಾಜ್ ಉಪಸ್ಥಿತರಿದ್ದರು.
ಸುಜಾತ ಸ್ವಾಗತಿಸಿದರು. ವಿನಯ ವಂದಿಸಿದರು. ವಿಜಯ ಗ್ರಾಮೀಣ ಪ್ರತಿಷ್ಠಾನದ ಉದ್ಯೋಗಿ ಕಾರ್ತಿಕ್ ಸಹಕರಿಸಿದರು. ನಿಶ್ಮಿತಾ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 40 ಮಂದಿ ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.