ಜಿಲ್ಲೆ

ಸುಳ್ಯದಲ್ಲಿ ಹೊಲಿಗೆ ತರಬೇತಿಗೆ ಚಾಲನೆ

ಸೌಮ್ಯ ಆರ್

ಸುಳ್ಯ: ಬ್ಯಾಂಕ್ ಆ್ ಬರೋಡದಿಂದ ಪ್ರವರ್ತಿಸಲ್ಪಟ್ಟ ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಜಾಲ್ಸೂರು ಗ್ರಾಪಂ, ಜಾಲ್ಸೂರು ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ, ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿಯವರು ಸಂಜೀವಿನಿ ಒಕ್ಕೂಟಕ್ಕೆ ಕೊಡಮಾಡಿದ ಹೊಲಿಗೆ ಯಂತ್ರ ವಿತರಣೆ, ಹೊಲಿಗೆ ತರಬೇತಿಗೆ ಚಾಲನೆ, ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಅಡ್ಕಾರಲ್ಲಿ ನಡೆಯಿತು.

ಜಾಲ್ಸೂರು ಗ್ರಾಪಂ ಉಪಾಧ್ಯಕ್ಷೆ ತಿರುಮಲೇಶ್ವರಿ ಅರ್ಭಡ್ಕ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಹೊಲಿಗೆ ಯಂತ್ರ ವಿತರಿಸಿದರು. ಬ್ಯಾಂಕ್ ಆ್ ಬರೋಡ ಸುಳ್ಯ ಶಾಖೆ ಹಿರಿಯ ವ್ಯವಸ್ಥಾಪಕ ಸರವಣ ಸೆಲ್ವ, ಹೆಡ್ ಕ್ಯಾಶಿಯರ್ ಸುಪ್ರೀತಾ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು. ಜಾಲ್ಸೂರು ಸಮುದಾಯ ಆರೋಗ್ಯ ಅಧಿಕಾರಿ ರಚನಾ ಆರೋಗ್ಯ ಮಾಹಿತಿ ನೀಡಿದರು.

ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕಿ ಶ್ವೇತಾ, ಜಾಲ್ಸೂರು ಗ್ರಾಪಂ ಸಿಬ್ಬಂದಿ ಚಿದಾನಂದ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ವೇದಾ ಶೆಟ್ಟಿ ಬೊಳುಬೈಲು ಉಪಸ್ಥಿತರಿದ್ದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಅವರನ್ನು ಸಂಜೀವಿನಿ ಒಕ್ಕೂಟದ ಪರವಾಗಿ ಗೌರವಿಸಲಾಯಿತು. ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಪ್ರಾಸ್ತಾವಿಕ ಮಾತನಾಡಿದರು. ಶಾಂತಾ ಡಿ.ಎನ್. ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕಿ ವಿಜಯ ಗಂಗಾಧರ ಕಾಳಮ್ಮನೆ ವಂದಿಸಿದರು. ಎಂಬಿಕೆ ಸೌಮ್ಯಾ ಕದಿಕಡ್ಕ ಕಾರ್ಯಕ್ರಮ ನಿರೂಪಿಸಿದರು.