ಜಿಲ್ಲೆ

ಏಳು ಲೀಟರ್ ಅಕ್ರಮ ಮದ್ಯ ಜಪ್ತಿ

ಇಂದಿರಾ ಎನ್ ಕೆ

ಕಾಸರಗೋಡು: ಬೈಕ್‌ನಲ್ಲಿ ಸಾಗಿಸುತ್ತಿದ್ದ ಏಳು ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು, ಕುಂಬಳೆ ರೇಂಜ್ ಅಬಕಾರಿ ದಳ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಉದ್ಯಾವರ ಚೌಕಿ ಅಂಬಿತ್ತಡಿ ನಿವಾಸಿ ಸಂತೋಷ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಕುಂಬಳೆ ರೇಂಜ್ ಅಧಿಕಾರಿ ಟಿ.ಎಂ.ಮೊಯ್ದೀನ್ ಸಾದಿಕ್ ಮತ್ತು ತಂಡ ಅಂಬಿತ್ತಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಪತ್ತೆ ಹಚ್ಚಿದ್ದಾರೆ.