ಜಿಲ್ಲೆ

ಹೆಜ್ಜೇನು ದಾಳಿಗೆ ಇಬ್ಬರು ಗಂಭೀರ

ಇಂದಿರಾ ಎನ್ ಕೆ

ಕೋಟ: ಇಲ್ಲಿನ ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಕೋಟತಟ್ಟು ಪರಿಸರದಲ್ಲಿ ಹೆಜ್ಜೇನು ದಾಳಿಗೆ ಇಬ್ಬರ ಸ್ಥಿತಿ ಗಂಭೀರವಾಗಿದೆ. ಕೋಟತಟ್ಟು ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ, ಪುತ್ರಿ ಸೌಜನ್ಯ ದಾಳಿಗೆ ತುತ್ತಾದವರು. ಗುರುವಾರ ಮುಂಜಾನೆ ಇಬ್ಬರೂ ತಮ್ಮ ಮೂಲನಾಗಬನಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳುವ ಸಂದರ್ಭ ಹೆಜ್ಜೇನು ದಾಳಿಗೈದಿದೆ.

ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಮತ್ತಿತರ ಸ್ಥಳೀಯರು ದಾಳಿಗೊಳಗಾದವರ ಮೈಮೇಲೆ ಗೋಣಿಚೀಲ ಹಾಗೂ ಬಟ್ಟೆ ಹಾಕಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಆಂಬುಲೆನ್ಸ್‌ನಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.