ರಿಕ್ಷಾದ ಚಕ್ರ ಉರುಳಿ ನಿಂತಿರುವುದು 
ಜಿಲ್ಲೆ

ರಿಕ್ಷಾದಿಂದ ಹಠಾತ್ ಬೇರ್ಪಟ್ಟ ಚಕ್ರ

ಇಂದಿರಾ ಎನ್ ಕೆ

ಹೆಬ್ರಿ: ಹೆಬ್ರಿಯಿಂದ ಬೇಳಂಜೆ ಕಡೆಗೆ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ರಿಕ್ಷಾದ ಚಕ್ರ ಬೇರ್ಪಟ್ಟಿದ್ದು, ಅದೃಷ್ಟವಶಾತ್ ಸಂಭವನೀಯ ಅನಾಹುತವೊಂದು ತಪ್ಪಿದೆ. ಬೇಳಂಜೆಯಲ್ಲಿ ಸಂಚರಿಸುತ್ತಿದ್ದಾಗ ಚಕ್ರವು ಆ್ಯಕ್ಸಿಲ್‌ನಿಂದ ಬೇರ್ಪಟ್ಟಿದ್ದು, ಚಾಲಕನು ನಿಧಾನಗತಿಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದದ್ದರಿಂದ ನಿಯಂತ್ರಣ ಸಾಧ್ಯವಾಗಿದೆ. ಚಕ್ರ ಬೇರ್ಪಟ್ಟ ರಭಸಕ್ಕೆ ರಿಕ್ಷಾ ಒಂದಷ್ಟು ದೂರ ರಸ್ತೆ ಮೇಲೆಯೆ ಜಾರಿಕೊಂಡು ಸಂಚರಿಸಿದೆ.