ಪಡುಕೋಣೆ ಸೇಂಟ್ ಆಂಟನಿ ಚರ್ಚ್‌ನಲ್ಲಿ ಹಿರಿಯ ನಾಗರಿಕ ಸಂಘವನ್ನು ಚರ್ಚ್ ಧರ್ಮಗುರು ಫ್ರಾನ್ಸಿಸ್ ಕರ್ನೆಲಿಯೊ ಉದ್ಘಾಟಿಸಿದರು 
ಜಿಲ್ಲೆ

ಹಿರಿಯ ನಾಗರಿಕ ಸಂಘ ಉದ್ಘಾಟನೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಪಡುಕೋಣೆ ಸೇಂಟ್ ಆಂಟನಿ ಚರ್ಚ್‌ನಲ್ಲಿ ಹಿರಿಯ ನಾಗರಿಕ ಸಂಘವನ್ನು ಚರ್ಚ್ ಧರ್ಮಗುರು ಫ್ರಾನ್ಸಿಸ್ ಕರ್ನೆಲಿಯೊ ಭಾನುವಾರ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿ ಧರ್ಮಗುರು ಪ್ರವೀಣ್ ಪಿಂಟೊ ಹಿರಿಯರಾದ ನಾವು ಕುಟುಂಬದಲ್ಲಿ ಈಗಿನ ಕಾಲದಲ್ಲಿ ಯಾವ ರೀತಿ ನಮ್ಮ ಕೌಟುಂಬಿಕ ಜೀವನ ನಡೆಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಕೆನಡಿ ಪಿರೇರಾ ಶುಭ ಹಾರೈಸಿದರು. ಮಾನವೀಯ ಕಾರ್ಯದರ್ಶಿ 22 ಆಯೋಗದ ಮುಖ್ಯಸ್ಥ ಪಿಲಿಫ್ ಡಿಸಿಲ್ವಾ ಹಾಗೂ ಕಾನ್ವೆಂಟಿನ ಸಿ.ಸುಪಿರಿಯರ್ ಮತ್ತು ಸಿಲ್ವೆಸ್ಟರ್ ಬುತ್ತೆತ್ಲೊ ಉಪಸ್ಥಿತರಿದ್ದರು. ಸಂಘದ ನೂತನ ಅಧ್ಯಕ್ಷರಾಗಿ ಚೀನಾ ಮಥಾಯಸ್ ಕ್ರಾಸ್ತಾ, ಉಪಾಧ್ಯಕ್ಷರಾಗಿ ಡಾಲ್ಫಿ ಡಿಸಿಲ್ವ ಮತ್ತು ಕಾರ್ಯದರ್ಶಿಯಾಗಿ ಡೇರಿ ರೆಬೆಲ್ಲೋ ಆಯ್ಕೆಯಾದರು.