ಜಿಲ್ಲೆ

ಮೊಗೇರರ ಆರ್ಥಿಕ ಬಲಿಷ್ಠತೆಗೆ ಚಿಂತನೆ ಅವಶ್ಯ : ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ.ಶಂಕರ್ ಸಲಹೆ

ಸೌಮ್ಯ ಆರ್

ಕುಂಬಳೆ: ವರ್ತಮಾನ ಕಾಲದ ದೈವಾರಾಧನೆ ಮತ್ತು ದೇವತಾರಾಧನೆ ಜತೆಯಲ್ಲಿ ಸಾಮಾಜಿಕ ಜೀವನದಲ್ಲಿ ಆರ್ಥಿಕವಾಗಿ ಹಿಂದುಳಿದ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಮೊಗೇರ ಜನಾಂಗದವರು ಆರ್ಥಿಕವಾಗಿ ಬಲಿಷ್ಠವಾಗಲು ಚಿಂತನೆ ನಡೆಸಬೇಕಿದೆ ಎಂದು ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ.ಶಂಕರ್ ಆದೂರು ಹೇಳಿದರು.

ಕಿದೂರು ಕುಂಟಂಗೇರಡ್ಕದಲ್ಲಿ ಧರ್ಮದೇವ ಬ್ರಹ್ಮ ಮೊಗೇರ ದೈವ ಪಾತ್ರಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಮೊಗೇರ ದೈವರಾಧನೆಯ ನೆಲೆ ಬೆಲೆ ಎಂಬ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧ್ಯಕ್ಷ ಕೊರಗಪ್ಪ ಬೆಳ್ಳಿಗೆ, ವಸಂತ ಅಜಕ್ಕೋಡು, ರಾಧಾಕೃಷ್ಣ ಉಳಿಯತಡ್ಕ, ರಾಮಪ್ಪ ಮಂಜೇಶ್ವರ, ಚಂದ್ರ ಕಾಜೂರು, ಗಂಗಾಧರ ಗೋಳಿಯಡ್ಕ, ಪಂಚಾಯಿತಿ ಸದಸ್ಯ ರವಿರಾಜ್ ಕಿದೂರು ಮೊದಲಾದವರಿದ್ದರು.