ಉಜ್ಜಿನಿ: ಮಹಿಳೆಯರೇ ತಯಾರಿಸಿದ ವಿವಿಧ ತಿನಿಸುಗಳು, ಸಾಮಾಗ್ರಿಗಳನ್ನು ಸುಲಭವಾಗಿ ಗ್ರಾಹಕರಿಗೆ ತಲುಪಿಸಲು ಸಂಜೀವಿನಿ ಸಂತೆ ಸಹಕಾರಿಯಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷೆ ರೇವಣ್ಣ ಪುಷ್ಪಾವತಿ ಹೇಳಿದರು.
ಇದನ್ನೂ ಓದಿ: ದೆವ್ವ ಬಿಡಿಸುವುದಾಗಿ ನಿರಂತರ ಥಳಿತ: ನೋವಿನಿಂದಲೇ ನರಳಿ ಪ್ರಾಣಬಿಟ್ಟ ಮಹಿಳೆ, ಪುತ್ರ ಸೇರಿ ಮೂವರ ಬಂಧನ! Evil spirit
ಗ್ರಾಮದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಸಂಜೀವಿನಿ ಸಂತೆಯನ್ನು ತಿಂಗಳಿಗೊಮ್ಮೆ ಆಯೋಜನೆ ಮಾಡಿದಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಾಯವಾಗುತ್ತದೆ. ಇಂತಹ ಅವಕಾಶವನ್ನು ಎಲ್ಲ ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪಿಡಿಒ ಉಮಾಪತಿ ಮಾತನಾಡಿ, ಭಾರತಾಂಬೆ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದಿಂದ ಮಾಸಿಕ ಸಂತೆ ನಡೆಯುತ್ತದೆ. ಇದರಲ್ಲಿ ವಸ್ತು ಪ್ರದರ್ಶನದೊಂದಿಗೆ ಮಹಿಳೆಯರು ತಯಾರಿಸಿದ ಆಹಾರ ಪದಾರ್ಥಗಳು, ಗೃಹ ಉಪಯೋಗ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಆರ್ಥಿಕವಾಗಿ ಸದೃಢರಾಗಲು ಕಾರಣವಾಗಿದೆ. ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸಲು ಇಂತಹ ಯೋಜನೆಗಳ ಲಾಭ ಪಡೆಯಬೇಕು ಎಂದರು.
ಗ್ರಾಪಂ ಸದಸ್ಯರಾದ ಪರುಶಪ್ಪ, ಹುಲಗಪ್ಪ, ಭಾರತಾಂಬೆ ಸಂಜೀವಿನಿ ಅಧ್ಯಕ್ಷೆ ಸಾವಿತ್ರಿ, ಕಾರ್ಯದರ್ಶಿ ಭಾಗ್ಯಲಕ್ಷ್ಮೀ, ಖಜಾಂಚಿ ಲೀಲಾವತಿ, ತಾಪಂ ಮೇಲ್ವಿಚಾರಕ ನಿಂಗೇಶ ಇತರರಿದ್ದರು.