ಮೂಲ್ಕಿ: ಮಹಿಳೆಯರು ಸ್ವಾವಲಂಬಿಗಳಾಗಿ ಬೆಳೆದು, ಕೌಟುಂಬಿಕ ಉನ್ನತಿ ಗಳಿಸಿಕೊಂಡು ಸಮಾಜದ ದೀನವರ್ಗಕ್ಕೆ ಸಹಕಾರಿಯಾಗುವ ಮೂಲಕ ಮಾದರಿಯಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಕಸ್ತೂರಿ ಪಂಜ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಸಂಘಟನೆಯ ಮೂಲ್ಕಿ ಶಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರತಿನಿಧಿ ಸಂಘಟನೆಯ ಮೂಲ್ಕಿ ಶಾಖೆ ಅಧ್ಯಕ್ಷ ರಾಜನ್ ಡಿಕೋಸ್ಟಾ ಮತ್ತು ಮಹಿಳಾ ಶಾಖೆ ಅಧ್ಯಕ್ಷೆ ಶಾರದಾ ಜಿ.ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಲ್ಯಾನ್ಸಿ ಅಲ್ಮೇಡಾ ಮತ್ತು ಫ್ಲೇವಿ ಡಿಸೋಜ, ಸಂಘಟನಾ ಕಾರ್ಯದರ್ಶಿ ವಿನಂತಿ ಉಪಸ್ಥಿತರಿದ್ದರು. ಸಂಧ್ಯಾ ಭಟ್ ವಂದಿಸಿದರು.