ಜಿಲ್ಲೆ

ಬದುಕು ಕಟ್ಟಿಕೊಳ್ಳಲು ದಾರಿದೀಪ : ಜಯಾನಂದ ಬಂಟ್ರಿಯಾಲ್ ಹೇಳಿಕೆ :

ಸೌಮ್ಯ ಆರ್

ನೆಲ್ಯಾಡಿ: ಬದುಕು ಕಟ್ಟಿಕೊಳ್ಳಲು ಸ್ವದ್ಯೋಗ ಪ್ರೇರಣಾ ಶಿಬಿರ ದಾರಿದೀಪವಾಗಿದೆ. ಇದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ ಸಾಧ್ಯ ಎಂದು ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಹೇಳಿದರು.

ಮಂಗಳವಾರ ನೆಲ್ಯಾಡಿ ಶಬರೀಶ ಕಲಾ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಶಿವಾನಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ವಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜ್ಞಾನವಿಕಾಸ ಕೇಂದ್ರದ ಸದಸ್ಯೆ ಅನಿತಾ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ರುಡ್‌ಸೆಟ್ ಸಂಸ್ಥೆ ಉಪನ್ಯಾಸಕ ಅಬ್ರಹಾಂ ಜೇಮ್ಸ್ , ರುಡ್‌ಸೆಟ್ ಸಂಸ್ಥೆಯಲ್ಲಿ ನೀಡುವ ತರಬೇತಿ ಹಾಗೂ ಸಂಸ್ಥೆ ಉದ್ದೇಶ ಮತ್ತು ಯುವಕ ಯುವತಿಯರು ನಿರುದ್ಯೋಗಿಗಳಾಗಿ ಉಳಿಯದೆ ಸ್ವಾವಲಂಬಿ ಜೀವನ ನಡೆಸುವ ಬಗ್ಗೆ ತರಬೇತಿ ನೀಡಿದರು.

ನೆಲ್ಯಾಡಿಯ ಜೆಸಿಐ ಅಧ್ಯಕ್ಷೆ ಸುಚಿತ್ರಾ ಬಂಟ್ರಿಯಾಲ್, ಅಯ್ಯಪ್ಪ ದೇವಸ್ಥಾನ ಆಡಳಿತ ಪದಾಧಿಕಾರಿ ಸುಧೀರ್ ಕುಮಾರ್, ಸಂಯೋಜಕಿ ಪೂರ್ಣಿಮಾ ಉಪಸ್ಥಿತರಿದ್ದರು. ಜೆವಿಕೆ ಸಮನ್ವಯಾಧಿಕಾರಿ ಚೇತನಾ ಜಿ.ಪ್ರಸ್ತಾವನೆಗೈದರು. ಸೇವಾಪ್ರತಿನಿಧಿ ಹೇಮಾವತಿ ನಿರೂಪಿಸಿ, ಕೇಂದ್ರದ ಸಂಯೋಜಕಿ ಪೂರ್ಣಿಮಾ ಸ್ವಾಗತಿಸಿದರು. ಕೇಂದ್ರದ ಸದಸ್ಯೆ ಸುನಿತಾ ವಂದಿಸಿದರು. ವಲಯದ ಸೇವಾ ಪ್ರತಿನಿಧಿಗಳಾದ ನಮಿತಾ ಶೆಟ್ಟಿ, ಸುಮನಾ, ವೇದಾವತಿ, ಸಂತೋಷ್, ಕವಿತಾ ಸಹಕರಿಸಿದರು. ಶಿವಾನಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಗೂ ಸ್ವಉದ್ಯೋಗ ಪ್ರೇರಿತ ಸದಸ್ಯರು ತರಬೇತಿ ಪಡೆದುಕೊಂಡು ಸ್ವ ಉದ್ಯೋಗ ತರಬೇತಿಗೆ ಆಯ್ಕೆಯಾದರು.