ಜಿಲ್ಲೆ

ಕಾರ್ಕಡದಲ್ಲಿ ಸ್ವಉದ್ಯೋಗ ಪ್ರೇರಣ ಶಿಬಿರ ಕಾರ್ಯಕ್ರಮ

ಇಂದಿರಾ ಎನ್ ಕೆ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಬ್ರಹ್ಮಾವರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಪಾಂಡೇಶ್ವರ ವಲಯದ ಪಡುಬೈಲು ಕಾರ್ಕಡ ಕಾರ್ಯಕ್ಷೇತ್ರದ ಶ್ರೀ ಗುರು ನರಸಿಂಹ ಜ್ಞಾನ ವಿಕಾಸ ಕೇಂದ್ರದಲ್ಲಿ ಸ್ವಉದ್ಯೋಗ ಪ್ರೇರಣ ಶಿಬಿರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾರ್ಕಡ ವಾದರಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯಶಿಕ್ಷಕ ಪ್ರಭಾಕರ್ ಕಾಮತ್ ಉದ್ಘಾಟಿಸಿದರು.

ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆ ಉಪನ್ಯಾಸಕಿ ಚೈತ್ರಾ ಸಂಸ್ಥೆಯಲ್ಲಿ ಯಾವ್ಯಾವ ತರಬೇತಿಗಳಿವೆ ಹಾಗೂ ಎಷ್ಟು ದಿನ ನಡೆಯುತ್ತವೆ, ಇದರ ಪ್ರಯೋಜನ, ಸ್ವ ಉದ್ಯೋಗ ಆಸಕ್ತರಿಗೆ ಸಾಲ ಸೌಲಭ್ಯ, ತರಬೇತಿಗೆ ಬರುವಾಗ ಏನು ದಾಖಲೆ ತರಬೇಕು ಎಂಬ ಬಗ್ಗೆ ವಾಹಿತಿ ನೀಡಿದರು.

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರಿಜಾ ಶೇಖರ್ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಸಂಜೀವ ದೇವಾಡಿಗ, ಪಾಂಡೇಶ್ವರ ವಲಯ ಅಧ್ಯಕ್ಷೆ ರಾಧಾ ಪೂಜಾರಿ, ಬ್ರಹ್ಮಾವರ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪುಷ್ಪಲತಾ, ವಲಯ ಮೇಲ್ವಿಚಾರಕ ಜಯಲಕ್ಷ್ಮೀ, ಸ್ಥಳೀಯ ಸೇವಾ ಪ್ರತಿನಿಧಿ ಶಾರದಾ, ಜ್ಞಾನವಿಕಾಸ ಸಂಯೋಜಕಿ ಯಶೋದಾ, ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.