

ಕೋಟ: ಅಭಿವೃದ್ಧಿಯ ಕೊನೆಯ ಹಂತದಲ್ಲಿರುವ ಕೋಟ ಅಮೃತೇಶ್ವರಿ ದೇಗುಲದ ಸನಿಹದಲ್ಲಿರುವ ವರುಣತೀರ್ಥ ಕೆರೆಗೆ ಕಾರ್ಕಳ ಮೀನುಗಾರಿಗಾ ಉಪನಿರ್ದೇಶಕ ಕಚೇರಿ ನೀಡಿದ ನಾಲ್ಕು ಸಾವಿರಕ್ಕೂ ಅಧಿಕ ಮೀನುಗಳನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೆರೆಗೆ ಸಮರ್ಪಿಸಿದರು.
ಕೆರೆ ಅಭಿವೃದ್ಧಿ ವೀಕ್ಷಿಸಿದ ಅವರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಈ ಕೆರೆ ಪ್ರಮುಖ ಪಾತ್ರ ವಹಿಸಲಿದ್ದು ಇಲ್ಲಿನ ಕೃಷಿಕರ ಬಹು ವರ್ಷಗಳ ಕನಸು ಸಾಕಾರಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್.ಸಿ.ಕುಂದರ್, ಸದಸ್ಯರಾದ ರತನ್ ಐತಾಳ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ಕೋಟ ಪಂಚಾಯಿತಿ ಸದಸ್ಯ ಚಂದ್ರ ಪೂಜಾರಿ, ಸಂಸದರ ಆಪ್ತ ಸಹಾಯಕ ಹರೀಷ್ ಕುವಾರ್ ಶೆಟ್ಟಿ ಸ್ಥಳೀಯರು ಉಪಸ್ಥಿತರಿದ್ದರು.