ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವಲಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು 
ಜಿಲ್ಲೆ

ಪ್ರತಿಭಾ ಕಾರಂಜಿ ವಲಯಮಟ್ಟದ ಸ್ಪರ್ಧೆಗೆ ಆಯ್ಕೆ

ಇಂದಿರಾ ಎನ್ ಕೆ

ಕುಂದಾಪುರ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವಲಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಾದ ಪ್ರಾರ್ಥನಾ ಜಿ. (ಚಿತ್ರಕಲೆ), ಆಕಾಂಕ್ಷಾ ಎಸ್.ಪೈ.(ಸಂಸ್ಕೃತ ಧಾರ್ಮಿಕ ಪಠಣ), ಯುಕ್ತಾ ಹೊಳ್ಳ (ಸಂಸ್ಕೃತ ಭಾಷಣ), ಶುಕ್ತಿಜಾ (ಭರತನಾಟ್ಯ), ತರುಣ್ ಪ್ರಭು, ಸುಮಂತ್ ಭಟ್ (ರಸ ಪ್ರಶ್ನೆ), ಸಾತ್ವಿಕ್ ಎಸ್.ಭಟ್ ( ಆಶುಭಾಷಣ), ಧನ್ಯತ್ ಎ.ಖಾರ್ವಿ (ಭಾವಗೀತೆ), ಸಮೀಕ್ಷಾ ಜೆ. (ಪ್ರಬಂಧ ರಚನೆ), ಶ್ರಾವಣಿ ಎಸ್.ನಾಯಕ್ (ಹಿಂದಿ ಭಾಷಣ), ಜೀವಿಕಾ ಎಸ್. ( ಕನ್ನಡ ಭಾಷಣ), ಮಾನ್ವಿತಾ ಎಸ್. (ಕವನ ಪದ್ಯವಾಚನ), ಮಹಮ್ಮದ್ ಸವೇದ್, ಮಹಮ್ಮದ್ ನೌಮಾನ್, ಆಯಿಷಾ ಅಕ್ಸಾ, ಅಮಿನಾ ಜಾರಾ, ಆಮ್ರಾ ಫಾತಿಮಾ, ಆಯಿಷಾ ಮೆಹೆಕ್ (ಕವ್ವಾಲಿ) ಅವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರರು ಅಭಿನಂದನೆ ಸಲ್ಲಿಸಿದ್ದಾರೆ.