ಜಿಲ್ಲೆ

ಕ್ವಿಜ್‌ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಮಂಗಳೂರು ಕಪಿತಾನಿಯೋ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ರೂರಲ್ ಐಟಿ ಕ್ವಿಜ್‌ನಲ್ಲಿ, ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ(ಸಿ.ಬಿ.ಎಸ್.ಇ) ಶಾಲೆಯ ಹತ್ತನೇ ತರಗತಿಯ ಅನೀಶ್ ಎನ್.ಕೆ ಹಾಗೂ ಸೋಹನ್ ಶೆಟ್ಟಿ, ಎಂಟನೇ ತರಗತಿಯ ಮೊಹಮ್ಮದ್ ನುಮಾನ್ ಭಾಗವಹಿಸಿ ವಿಭಾಗೀಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅ.28ರಂದು ಮೈಸೂರಿನಲ್ಲಿ ವಿಭಾಗೀಯಮಟ್ಟದ ಕ್ವಿಜ್ ನಡೆಯಲಿದೆ. ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.