5ನೇ ಕರ್ನಾಟಕ ಸ್ಟೇಟ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್ ಗುಂಪು ಆಸನ ಸ್ಪರ್ಧೆಯಲ್ಲಿ ಲಾಸ್ಯ ಮಧ್ಯಸ್ಥ ಬಹುಮಾನ ಪಡೆದರು 
ಜಿಲ್ಲೆ

ಲಾಸ್ಯ ಮಧ್ಯಸ್ಥ ರಾಷ್ಟ್ರಮಟ್ಟಕ್ಕೆ ಆಯ್ಕೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಜರುಗಿದ 5ನೇ ಕರ್ನಾಟಕ ಸ್ಟೇಟ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್-2024ರಲ್ಲಿ ಲಾಸ್ಯ ಮಧ್ಯಸ್ಥ ಗುಂಪು ಆಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ. ಕುಂದಾಪುರದ ಅರುಣ ಮಧ್ಯಸ್ಥ ಮತ್ತು ಲತಾ ದಂಪತಿ ಪುತ್ರಿ.