ಗುಳೇದಗುಡ್ಡ: ಸಮೀಪದ ಕೋಟೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸಾಲಗಾರ ಸಾಮಾನ್ಯ ಕ್ಷೇತ್ರಗಳಿಗೆ ಭಾನುವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಬಿರುಸಿನ ಮತದಾನ ನಡೆಯಿತು.
ಒಟ್ಟು 2,059 ಮತಗಳಲ್ಲಿ 1,605 ಮತಗಳು (ಶೇ.77.95) ಚಲಾವಣೆಯಾದವು.
ಸಂಘದ ಸಾಲಗಾರ ಸಾಮಾನ್ಯ ಕ್ಷೇತ್ರದ ಐದು ಸ್ಥಾನಗಳಿಗೆ ಆರು ಆಭ್ಯರ್ಥಿಗಳು ಸ್ಪರ್ಧಿಸಿದ್ದರು. ಕೋಟೆಕಲ್ಲ ಗ್ರಾಮದ ಯಲಗುರ್ದಪ್ಪ ತೊಂಗಲಂಗಿ 1,435, ಸಂಗಪ್ಪ ಹಡಪದ 1,424, ತೋಗಣಶಿಯ ಮಾಗುಂಡಪ್ಪ ಸುಂಕದ 1,423, ಕೋಟೆಕಲ್ಲನ ಹನುಮಂತ ಮಾವಿನಮರ 1414 ಹಾಗೂ ಪರ್ವತಿ ಗ್ರಾಮದ ಮಳಿಯಪ್ಪ ಹಾವಡಿ 1,388 ಮತಗಳನ್ನು ಪಡೆದು ಆಯ್ಕೆಯಾದರು.
ಇದನ್ನೂ ಓದಿ: ಲೋಕಸಭೆಗೆ ಕೈ ಹಿಡಿಯಲಿರುವ ಗ್ಯಾರಂಟಿಗಳು
ಕೋಟೆಕಲ್ಲನ ಮಲ್ಲಿಕಾರ್ಜುನ ಆಲೂರು 310 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಎಂ.ಎಸ್. ಸಿಂಧೂರ ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಒಟ್ಟು 12 ಆಡಳಿತ ಮಂಡಳಿ ಸದಸ್ಯರಲ್ಲಿ ಈಗಾಗಲೇ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಹಾನಾಪುರ ಎಲ್.ಟಿ. ಗ್ರಾಮದ ಯಮನಪ್ಪ ರಾಠೋಡ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಖಾನಾಪುರ ಎಸ್.ಪಿ. ಗ್ರಾಮದ ದ್ಯಾಮಣ್ಣ ಗದ್ದನಕೇರಿ, ಹಿಂದುಳಿದ ‘ಅ’ ವರ್ಗದಿಂದ ಹರದೊಳ್ಳಿಯ ಲಕ್ಷ್ಮಣ ಹಾಲನ್ನವರ, ಹಿಂದುಳಿದ ‘ಬ’ ವರ್ಗದಿಂದ ಸುಮಡ್ಡಿಯ ನಾಗಪ್ಪ ಮುರಗೋಡ, ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಗುಳೇದಗುಡ್ಡದ ನಿರ್ಮಲಾ ಕಳ್ಳಿಗುಡ್ಡ, ಕೋಟೆಕಲ್ಲಿನ ಶಶಿಕಲಾ ಅಬಕಾರಿ, ಸಾಲೇತರ ಕ್ಷೇತ್ರದಿಂದ ಗುಳೇದಗುಡ್ಡದ ಸಂತೋಷ ತಿಪ್ಪಾ ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಬಳಿಕ ವಿಜೇತ ಅಭ್ಯರ್ಥಿಗಳ ಪರವಾಗಿ ವಿಜಯೋತ್ಸವ ನಡೆಯಿತು. ಸಂತೋಷ ನಾಯನೇಗಲಿ, ಸಚಿನ್ ರಾಂಪೂರ, ಮುಪ್ಪಣ್ಣ ಶೀಲವಂತ, ಪ್ರಕಾಶ ವಾಳದವುಂಕಿ, ರುದ್ರಪ್ಪ ಮಂತ್ರಿ, ಶೇಖರ ರಾಠೋಡ ಇತರರಿದ್ದರು.