ಅನನ್ಯ ರಂಜನಿ 
ಜಿಲ್ಲೆ

ದೂರದರ್ಶನ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ

ಇಂದಿರಾ ಎನ್ ಕೆ

ಮೂಡುಬಿದಿರೆ: ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಮೂಡುಬಿದಿರೆಯ ಭರತನಾಟ್ಯ ಕಲಾವಿದೆ ಅನನ್ಯ ರಂಜನಿ ಆಯ್ಕೆಯಾಗಿದ್ದಾರೆ.
ಮಹಾವೀರ - ಆರತಿ ದಂಪತಿ ಪುತ್ರಿಯಾಗಿರುವ ಈಕೆ ಸಪ್ತವರ್ಣ ರಶ್ಮಿತಾ ಲಾಸ್ಯ ಹಾಗೂ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್, ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯೆ. ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಪಡೆದಿದ್ದು, ವಿದ್ವತ್ ಪೂರ್ವ ಪರೀಕ್ಷೆಯ ತಯಾರಿ ನಡೆಸುತ್ತಿದ್ದಾರೆ. ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಅಂತಿಮ ವಿಜ್ಞಾನ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.