ಅಳವಂಡಿಯಲ್ಲಿ ಹಮ್ಮಿಕೊಂಡಿದ್ದ ರಕ್ತಹಿನತೆ ಕುರಿತು ಮಾಹಿತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಅಂಗನವಾಡಿ ಮೇಲ್ವಿಚಾರಕಿ ರೆಹಮತಬೀ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ನಿಲಯ ಮೇಲ್ವಿಚಾರಕಿ ಮೀನಾಕ್ಷಿ, ಆರೋಗ್ಯ ಸಹಾಯಕ ನಾಗರಾಜ, ಅಂಗನವಾಡಿ ಕಾರ್ಯಕರ್ತೆಯರಾದ ಮರಿಬಸಮ್ಮ, ಲಕ್ಷ್ಮೀ, ಹನುಮಕ್ಕ, ಅಕ್ಕಮ್ಮ, ಲಲಿತಾ, ನಾಗರತ್ನಾ, ಪುಷ್ಪಾ, ವಿಜಯಲಕ್ಷ್ಮೀ, ಲಲಿತಾ ಇತರರಿದ್ದರು. 
ಜಿಲ್ಲೆ

ಮೊಳಕೆಕಾಳು ಹೆಚ್ಚಾಗಿ ಸೇವಿಸಿ

Kopala - Desk - Eraveni

ಅಳವಂಡಿ: ಪೌಷ್ಟಿಕಾಂಶ ಇಲ್ಲದಿರುವ ಆಹಾರ ಸೇವನೆಯಿಂದ ರಕ್ತಹೀನತೆ ಉಂಟಾಗುತ್ತದೆ ಎಂದು ಅಂಗನವಾಡಿ ಮೇಲ್ವಿಚಾರಕಿ ರೆಹಮತಬೀ ಹೇಳಿದರು.

ಗ್ರಾಮದ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕೊಪ್ಪಳದಿಂದ ಆಯೋಜಿಸಿದ್ದ ಪೋಷಣೆ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ರಕ್ತಹಿನತೆ ಕುರಿತು ಗುರುವಾರ ಮಾತನಾಡಿದರು.

ಬಾಣಂತಿ, ಗರ್ಭಿಣಿಯರು ಹಾಗೂ ಮಕ್ಕಳು ತರಕಾರಿ, ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ರಕ್ತಹೀನತೆಯಿಂದ ಉಂಟಾಗುವ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎಂದರು.