ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ 14 ಮತ್ತು 17ರ ವಯೋಮಾನದ ಬಾಲಕರ ತಂಡಗಳು ದ್ವಿತೀಯ ಸ್ಥಾನ ಪಡೆದುಕೊಂಡಿವೆ.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಆಕಾಶ್ ರೈ, ಅಕ್ಷಜ್ ಶೆಟ್ಟಿ, ತನ್ವಿತ್, ಅಹಮ್ಮದ್ ಶಬೀರ್, ಪುನೀತ್, ಚಿಂತನ್ ಕೆ.ಸಿ, ಆಯುಶ್ ಎಸ್.ಶೆಟ್ಟಿ, ಕವೀಶ್ ಬಿ.ಕೆ ಭಾಗವಹಿಸಿದ್ದಾರೆ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ಆಯತ್ತುಲ್ಲಾ ಸಲೀಮ್, 7ನೇ ತರಗತಿಯ ಶಿಶಿರ್ ಜೆ.ಸಾಲ್ಯಾನ್, ಮುಹಮ್ಮದ್ ಇರಾಜ್, ಸುಜಿತ್, ಸ್ವರ್ಣೇಶ್, ಆಯುಶ್ ಡಿ.ಪೂಜಾರಿ, ವಚನ್ ಕನ್ಯಾನ, ಮೊಹಮ್ಮದ್ ಅಫಾಮ್ ಭಾಗವಹಿಸಿದ್ದಾರೆ. ತಂಡಕ್ಕೆ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್ ಹಾಗೂ ವಿದ್ಯಾ, ಶ್ರೀರಂಜಿನಿ ತರಬೇತಿ ನೀಡಿದ್ದಾರೆ.