ಕಾರವಾರ: ಚಿಕ್ಕ ಮರಿಗಳು ಪಟಪಟನೆ ರೆಕ್ಕೆ ಬಡಿಯುತ್ತ ವಿಷಾಲ ಕಡಲೆಡೆಗೆ ಹೆಜ್ಜೇ ಹಾಕಿದಾಗ ಅಲ್ಲಿ ಸೇರಿದ್ದವರಿಗೆ ಏನೋ ನಿರಾಳ. ವಿಷಾಲ ಸಾಗರದಲ್ಲಿ ಎಲ್ಲಿ ಮರಿಗಳು ಅಪಾಯಕ್ಕೆ ಸಿಲುಕಿದವೋ ಎಂಬ ಆತಂಕ! ಈ ಸನ್ನಿವೇಶ ಸೃಷ್ಟಿಯಾಗಿದ್ದು, ಮಂಗಳವಾರ ಕಾರವಾರದ ದೇವಬಾಗ ಕಡಲ ತೀರದಲ್ಲಿ.
ಒಂದುವರೆ ತಿಂಗಳ ಹಿಂದೆ ಆಲಿವ್ ರೆಡ್ಲಿ ಪ್ರಭೇದದ ಆಮೆಯೊಂದು ಸಮುದ್ರದಿಂದ ಬಂದು ಮರಳೊಳಗೆ ಮೊಟ್ಟೆಯಿಟ್ಟು ಹೋಗಿತ್ತು. ಅರಣ್ಯ ಇಲಾಖೆಯ ಮರೈನ್ ಇಕೋ ಸೆಲ್ ಅಧಿಕಾರಿಗಳು ಮೊಟ್ಟಎಯಿಟ್ಟ ಜಾಗವನ್ನು ಸಂರಕ್ಷಿಸಿದ್ದ 95 ಮೊಟ್ಟೆಗಳಲ್ಲಿ 45 ಮೊಟ್ಟೆಗಳು ಮರಿಯಾಗಿದ್ದು, ಅವುಗಳನ್ನು ಮಂಗಳವಾರ ಸಮುದ್ರಕ್ಕೆ ಬಿಡಲಾಯಿತು.
ಚಿತ್ತಾಕುಲಾ ಗ್ರಾಪಂ ಅಧ್ಯಕ್ಷ ಹಾಗೂ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಮೊಟ್ಟೆಗಳನ್ನು ಸಮುದ್ರಕ್ಕೆ ಬಿಟ್ಟರು. ಈ ವರ್ಷದ ಹಂಗಾಮಿನಲ್ಲಿ ಕಾರವಾರ ತಾಲೂಕಿನಲ್ಲಿ ಮೊದಲ ಕಡಲಾಮೆ ಮರಿಗಳ ರಕ್ಷಣೆ ಕಾರ್ಯಾಚರಣೆ ಇದಾಗಿದೆ. ಡಿಎಫ್‌ಒ ಎನ್.ರವಿಶಂಕರ್, ಎಸಿಎಫ್ ಕೆ.ಸಿ.ಜಯೇಶ, ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ, ಆರ್‌ಎಫ್‌ಒಗಳಾದ ಗಜಾನನ ನಾಯ್ಕ, ಭವ್ಯಾ ನಾಯ್ಕ ಹಾಗೂ ಇತರರು ಇದ್ದರು.
ಇದನ್ನೂ ಓದಿ: ಕಡಲ ಒಡಲು ಸೇರಿದ ಮರಿ ಕೂರ್ಮ ಪಡೆ