ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಬನ್ನಿಸ್, ಕಬ್ಸ್ ಬುಲ್‌ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ ಗಣಪತಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಡಾ.ಪ್ರದೀಪ್ ನಾವೂರು ಅವರು, ಶ್ರೀ ಧರ್ಮಸ್ಥಳದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವುದೇ ಹೆಮ್ಮೆಯ ವಿಚಾರ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವ ಗುಣಗಳುಳ್ಳ ವಿದ್ಯಾರ್ಥಿಗಳು ಪ್ರತಿ ವರ್ಷವೂ ಹೊರಬರುತ್ತಲೇ ಇದ್ದಾರೆ ಎಂದರು.
ಪ್ರಾಪ್ತಿ ವಿ ಶೆಟ್ಟಿ ಪರಿಸರಸ್ನೇಹಿ ಗಣಪತಿ ವಿಗ್ರಹ ತಯಾರಿಸಿದರು. ಕಬ್ಸ್ ವಿದ್ಯಾರ್ಥಿ ಶ್ರೀರಾಮ ಭಟ್ ಮೂರ್ತಿಗೆ ಪೂಜೆ ನೆರವೇರಿಸಿದ್ದು, ಗಣಪತಿ ವಿಗ್ರಹಕ್ಕೆ ಸ್ಕೌಟ್ಸ್ ಗೈಡ್ಸ್ ಸ್ಕಾರ್ಫ್ ತೊಡಿಸಿ ಸ್ಕೌಟ್ಸ್ ಗಣಪತಿ ಎಂಬ ಶೀರ್ಷಿಕೆ ಜತೆಗೆ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿತ್ತು. ಮುಖ್ಯಶಿಕ್ಷಕಿ ಹೇಮಲತಾ ಎಂ.ಆರ್ ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ ಪ್ರಮೀಳಾ ಪೂಜಾರಿ, ಸ್ಕೌಟ್ಸ್ ಗೈಡ್ಸ್ ಶಿಕ್ಷಕರಾದ ಮಂಜುನಾಥ್, ಜಯರಾಮ್, ಕಾರುಣ್ಯ, ನೀತಾ ಕೆ.ಎಸ್, ಗೀತಾ ಪಿ, ಜಯಲಕ್ಷ್ಮೀ, ಪ್ರಮೀಳಾ ಎನ್, ರಮ್ಯಾ ಬಿ.ಎಸ್ ಉಪಸ್ಥಿತರಿದ್ದರು. ಅಭಿಜ್ಞಾ ಸ್ವಾಗತಿಸಿ, ಅನಘಾ ವಂದಿಸಿದರು. ಉನ್ನತಿ ಎಸ್, ದಿಶಾ ಡಿ.ಎ. ಕಾರ್ಯಕ್ರಮ ನಿರೂಪಿಸಿದರು.