ಸಾಂದರ್ಭಿಕ ಚಿತ್ರ 
ಜಿಲ್ಲೆ

ಸ್ಕೂಟರ್ ತಡೆದು ಹಲ್ಲೆ, ಜೀವಬೆದರಿಕೆ

ಇಂದಿರಾ ಎನ್ ಕೆ

ಕಾರ್ಕಳ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾಪಸ್ಸಾಗುತ್ತಿದ್ದ ವ್ಯಕ್ತಿಯೋರ್ವರಿಗೆ ಮುಸ್ಲಿಂ ಕುಟುಂಬವೊಂದು ಹಲ್ಲೆ ನಡೆಸಿದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂಪದಕಟ್ಟೆ ಜಿಡಿ ಬೆಟ್ಟುಮನೆ ವಿಶ್ವನಾಥ್(38) ದುರ್ಗ ಗ್ರಾಮ ತೆಳ್ಳಾರಿನ ಕುಕ್ಕಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಸ್ಕೂಟರ್‌ನಲ್ಲಿ ವಾಪಸ್ಸಾಗುತ್ತಿದ್ದಾಗ ಕುಕ್ಕಾಜೆ ನಿವಾಸಿ ರಿಯಾಜ್ ಎಂಬಾತ ಸ್ಕೂಟರ್ ತಡೆದು ನೀನು ಇಲ್ಲಿ ಯಾಕೆ ಬರುವುದು? ನಿನಗೆ ಬೇರೆ ದೇವಸ್ಥಾನ ಇಲ್ಲವೇ ಎಂದು ಬೈದಿರುತ್ತಾನೆ. ಬಳಿಕ ಹಲ್ಲೆ ನಡೆಸಿದ್ದು, ಅದೇ ಸಮಯ ಅಲ್ಲಿಗಾಗಮಿಸಿದ ರಿಯಾಜ್‌ನ ಮಕ್ಕಳಾದ ರಿಯಾನ್, ರಿಪ್ಪಾನ್ ಹಾಗೂ ರಿಮಾನ್‌ರವರೂ ವಿಶ್ವನಾಥರನ್ನು ತುಳಿದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಗಾಯಾಳು ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರತಿ ದೂರು: ರಿಯಾಜ್ ಅಹಮ್ಮದ್(50) ಕಣ್ಣು ಕಾಣದ ಮಗ ಪೌಜನ್‌ನನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದಾಗ, ತಮ್ಮ ಜಹೀರ್ ಎಂಬಾತ ಬುಲೆಟ್‌ನಲ್ಲಿ ಬಂದು, ನನ್ನನ್ನು ಮತ್ತು ಮಗನನ್ನು ತಡೆದು ನಿಲ್ಲಿಸಿ ನೀನು ಕಣ್ಣು ಕಾಣದ ನಿನ್ನ ಮಗನನ್ನು ರೋಡ್‌ನಲ್ಲಿ ಯಾಕೆ ಬಿಟ್ಟಿದ್ದಿ ಎಂದು ಬೈಯ್ದು ಹಲ್ಲೆ ನಡೆಸಿದ್ದು, ಈ ವೇಳೆ ಸ್ಥಳಕ್ಕೆ ನಜೀರ್, ಇಮ್ತಿಯಾಜ್, ಹನೀಫ್, ವಿಶ್ವನಾಥ, ಇರ್ಷಾದ್ ಹಾಗೂ ಇತರ ಸುಮಾರು 20ಮಂದಿ ರಿಕ್ಷಾ ಮತ್ತು ಕಾರಿನಲ್ಲಿ ಬಂದು, ರಿಕ್ಷಾದ ಲಿವರ್ ಜಾಕನ್ನು ತಂದು ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿ ಮಕ್ಕಳಾದ ರಿಹಾನ್, ರಿಮಾನ್, ರಿಫಾನ್ ಮತ್ತು ಪೌಜನ್ ಅವರಿಗೆ ಜಹೀರ್, ನಜೀರ್, ಇರ್ಷಾದ್, ಇಮ್ತಿಯಾಜ್ ಹನೀಫ್ ಹಾಗೂ ಇತರರು ಕಲ್ಲಿನಿಂದ ಹೊಡೆದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ರಿಯಾಜ್ ಅಹಮ್ಮದ್ ಪ್ರತಿ ದೂರು ನೀಡಿದ್ದಾರೆ.