ಜಿಲ್ಲೆ

ಮನೆ ಅಂಗಳದಿಂದ ಸ್ಕೂಟರ್ ಕಳವು

ಸೌಮ್ಯ ಆರ್

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಪ್ತಿಯ ಮೂಕಂಪಾರೆ ನಿವಾಸಿ ಅಬ್ದುಲ್ಲ ಎಂಬುವರ ಸ್ಕೂಟರ್ ಮನೆ ಅಂಗಳದಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಬ್ದುಲ್ಲ ಅವರು ವಿದೇಶದಲ್ಲಿದ್ದು, ಸೋಮವಾರ ರಾತ್ರಿ ಸ್ಕೂಟರ್ ಮನೆ ವಠಾರದಿಂದ ಕಳವಾಗಿರುವುದಾಗಿ ಅಬ್ದುಲ್ಲ ಅವರ ಸಂಬಂಧಿ ಉಮರುಲ್ ಫಾರೂಕ್ ಎಂಬುವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.