ಜಿಲ್ಲೆ

ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರಯೋಗ ದರ್ಶನ

Avinash R

ಗುರುಪುರ: ಉನ್ನತ ಭಾರತ ಅಭಿಯಾನದಡಿ ಮೂಡುಬಿದಿರೆಯ ಎಸ್.ಎನ್.ಎಂ ಪಾಲಿಟೆಕ್ನಿಕ್‌ನ 4ನೇ ವರ್ಷದ ವಿಜ್ಞಾನ ಪ್ರಯೋಗ ದರ್ಶನ ಕಾರ್ಯಕ್ರಮ ಕುಪ್ಪೆಪದವಿನ ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆಯಿತು.

ಎಸ್‌ಎನ್‌ಎಂ ಪಾಲಿಟೆಕ್ನಿಕ್ ಕಾಲೇಜಿನ 15 ಮಂದಿ ವಿದ್ಯಾರ್ಥಿಗಳು ಮತ್ತು ಮೂವರು ಉಪನ್ಯಾಸಕರ ತಂಡ ಕಾಲೇಜಿನಲ್ಲೇ ಸಿದ್ಧಪಡಿಸಿದ ಉಪಕರಣಗಳನ್ನು ಎನ್‌ಸಿಆರ್‌ಟಿಯನ್ವಯ ಪರಿಷ್ಕೃತಗೊಂಡ 10ನೇ ತರಗತಿಯ ಪಠ್ಯಕ್ರಮದಂತೆ ವಿಜ್ಞಾನ ಪ್ರಯೋಗವನ್ನು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಖುದ್ದಾಗಿ ಪ್ರಯೋಗ ವಾಡಲು ಅವಕಾಶ ನೀಡಿತು.

ಕುಪ್ಪೆಪದವು ಪ್ರೌಢಶಾಲೆಯ 45 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ನೆರವಿನಿಂದ ಅತೀವ ಆಸಕ್ತಿಯಿಂದ ವಿಜ್ಞಾನ ಪ್ರಯೋಗ ವಾಡಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ಬಾಬು ಪಿ., ಎಸ್‌ಡಿಎಂಸಿ ಸದಸ್ಯ ಶೇಖ್ ಅಬ್ದುಲ್ಲ, ಉಪನ್ಯಾಸಕರಾದ ರಾಮ ಪ್ರಸಾದ್, ಸುಶಾಂತ್, ಗೋಪಾಲಕಷ್ಣ, ಪ್ರೌಢಶಾಲಾ ವಿಜ್ಞಾನ ಶಿಕ್ಷಕ ಜೆ.ವಾರ್ಕ್ ಮೆಂಡೋನ್ಸ ಹಾಗೂ ಪ್ರೌಢಶಾಲಾ ಶಿಕ್ಷಕರು ಉಪಸ್ಥಿತರಿದ್ದರು.