ಜಿಲ್ಲೆ

ವಿದ್ಯಾರ್ಥಿವೇತನ, ವೈದ್ಯಕೀಯ ನೆರವು ವಿತರಣೆ

ಇಂದಿರಾ ಎನ್ ಕೆ

ಪಡುಬಿದ್ರಿ: ಅದವಾರು ಆದರ್ಶ ಸಂಗಳ ಒಕ್ಕೂಟ ವತಿಯಿಂದ ಅದವಾರಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸಲಾಯಿತು.

ಪ್ರತಿ ವರ್ಷದಂತೆ ಸ್ಮಾರಕ ದತ್ತಿ ನಿಧಿ, ಸ್ಮಾರಕ ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ನೆರವು ಸಹಿತ ಒಟ್ಟು 50,000 ರೂ. ವಿತರಿಸಲಾಯಿತು.

ಎರ್ವಾಳು ಮೂಡುಬೆಟ್ಟು ಹೊಸಮನೆ ಕಮಲ ಕೆ.ಶೆಟ್ಟಿ ಸ್ಮಾರಕ ನಿಧಿಯಿಂದ ಒಂಬತ್ತು ಮಂದಿ ವಿದ್ಯಾರ್ಥಿಗಳಿಗೆ, ಪ್ರಾಂಶುಪಾಲ ಎ.ಎಸ್.ಭಟ್ ದತ್ತಿನಿಧಿಯಿಂದ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಹಾಗೂ ಎರ್ವಾಳು ನೈವಾಡಿ ಸುಂದರಿ ಕಾಂತರ ಶೆಟ್ಟಿ ಸ್ಮಾರಕ ನಿಧಿಯಿಂದ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಹಾಗೂ ಉನ್ನತ ಶಿಕ್ಷಣದ ನಾಲ್ವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಮಧುಮೇಹದಿಂದ ಎರಡೂ ಕಾಲುಗಳನ್ನು ಕಳೆದುಕೊಂಡ ಸ್ಥಳೀಯ ವ್ಯಕ್ತಿಯೊಬ್ಬರಿಗೆ ವೈದ್ಯಕೀಯ ನೆರವು ನೀಡಲಾಯಿತು.

ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಅಧ್ಯಕ್ಷತೆ ವಹಿಸಿದ್ದರು. ಕಮಲ ಶೆಡ್ತಿ ಸ್ಮಾರಕ ನಿಧಿಯ ಪ್ರಾಯೋಜಕ ಉದಯ ಕೆ.ಶೆಟ್ಟಿ, ನೈವಾಡಿ ಸುಂದರಿ ಕಾಂತರ ಶೆಟ್ಟಿ ಸ್ಮಾರಕ ನಿಧಿಯ ಪ್ರಾಯೋಜಕ ನಾರಾಯಣ ಕೆ.ಶೆಟ್ಟಿ, ಯುವಕ ಸಂ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ, ಮಹಿಳಾ ಮಂಡಲ ಅಧ್ಯಕ್ಷೆ ಸುಜಾತಾ, ಬಾಲಕೃಷ್ಣ ಭಂಡಾರಿ ಉಪಸ್ಥಿತರಿದ್ದರು. ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸುದರ್ಶನ ವೈ.ಎಸ್.ಪ್ರಸ್ತಾವಿಸಿ, ಸ್ವಾಗತಿಸಿದರು. ಗಣೇಶ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.