ಜಿಲ್ಲೆ

ಬದಿಯಡ್ಕದಲ್ಲಿ ವಿದ್ಯಾರ್ಥಿವೇತನ ವಿತರಣೆ

ಸೌಮ್ಯ ಆರ್

ಬದಿಯಡ್ಕ: ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬೆಂಗಳೂರಿನ ಭಟ್ ಬಯೋ ಟೆಕ್ ಇಂಡಿಯಾ ಸಂಸ್ಥೆಯ ಡಾ.ಶಾಮ ಭಟ್ ವತಿಯಿಂದ ಶಿಷ್ಯವೇತನ ವಿತರಣೆ ನಡೆಯಿತು.

ದಿ.ಪೊಟ್ಟಿಪ್ಪಲ ನಾರಾಯಣ ಭಟ್ಟರ ಸ್ಮರಣಾರ್ಥ ಶಾಲೆಯಿಂದ ಗುರುತಿಸಲ್ಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿದ್ದು, ಈ ವರ್ಷದ ಶಿಷ್ಯವೇತನವನ್ನು ಅಕ್ಷಯಾ ವೆಂಕಟೇಶ್ ಮತ್ತು ಜಯಂತ ಕೃಷ್ಣ ಭಟ್ ಕೆ. ಪಡೆದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆರೆಮೂಲೆ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೊಟ್ಟಿಪ್ಪಲ ನಾರಾಯಣ ಭಟ್ ಪುತ್ರ ಡಾ.ಗಿರೀಶ್, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷೆ ಡಾ.ವಾಣಿಶ್ರೀ ಕಾಸರಗೋಡು, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮಧುಸೂದನ ತಿಮ್ಮಕಜೆ, ಸದಸ್ಯ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು. ಶಿಕ್ಷಕಿ ಸರೋಜಾ ಕಾನತ್ತಿಲ ನಿರೂಪಿಸಿದರು.